ಯಾದಗಿರಿ : ಟ್ಯಾಂಕರ್, ಕಾರು ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಬಳಿ ಅಪಘಾತ ನಡೆದಿದೆ. ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹ್ಮದ್ ವಾಜೀದ್ ಹುಸೇನ್(39), ಮಹ್ಮದ್ ಮಜರ್ ಹುಸೇನ್(79), ನೂರ್ ಜಹಾನ್ ಬೇಗಂ(70), ಹೀನಾ ಬೇಗಂ(30), ಇಮ್ರಾನ್(22) ಮತ್ತು ಉಮೇಜಾ (6ತಿಂಗಳು) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಬಾಲಕ ಮಹ್ಮದ್ ಪಾಜೀಲ್ ಹುಸೇನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement. Scroll to continue reading.
ಮೃತರು ರಾಯಚೂರು ಜಿಲ್ಲೆ ಲಿಂಗಸೂಗುರು ತಾಲೂಕಿನ ಹಟ್ಟಿ ಪಟ್ಟಣದವರು ಎನ್ನಲಾಗಿದೆ. ಅವರು ತೆಲಂಗಾಣದ ಕೊಡಂಗಲ್ ಜವಳ ಕಾರ್ಯಕ್ಕೆ ಹೋಗಿದ್ದರು. ಹಿಂದಿರುಗುತ್ತಿದ್ದ ವೇಳೆ ಗುರುಮಠಕಲ್ ಬಳಿ ಟ್ಯಾಂಕರ್ ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement. Scroll to continue reading.