ದರ್ಶನ್ – ತರುಣ್ ಸುಧೀರ್ ಹೊಸ ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ನಾಯಕಿ
Published
1
ಚಂದನವನ : ದರ್ಶನ್ ತೂಗುದೀಪ ನಟನೆಯ ಬಹುನಿರೀಕ್ಷಿತ ಚಿತ್ರ ಕ್ರಾಂತಿ. ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದೆ. ಅಲ್ಲದೇ ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ.
ಈ ನಡುವೆ ದರ್ಶನ್ ಹೊಸ ಚಿತ್ರದ ಮುಹೂರ್ತ ಇಂದು ವರಮಹಾಲಕ್ಷ್ಮಿ ಹಬ್ಬದ ದಿನ ನಗರದ ದೇವಸ್ಥಾನವೊಂದರಲ್ಲಿ ನೆರವೇರಿದೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿಯವರು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.
ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣವಿದೆ. ಈ ಚಿತ್ರದ ಮೂಲಕ ದರ್ಶನ್ – ತರುಣ್ ಸುಧೀರ್ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನ ‘ ರಾಬರ್ಟ್’ ಸೂಪರ್ ಹಿಟ್ ಆಗಿತ್ತು.
ವಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ 90ರ ದಶಕದಲ್ಲಿ ಆಳಿದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ಅನನ್ಯ ರಾಮ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ತಾರಾ ದಂಪತಿ ಕೋಟಿ ನಿರ್ಮಾಪಕ ರಾಮು ಮತ್ತು ಮಾಲಾಶ್ರೀಯವರ ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷ.
Advertisement. Scroll to continue reading.
ಸದ್ಯ ಚಿತ್ರದ ಟೈಟಲ್ ಅನೌನ್ಸ್ ಆಗಿಲ್ಲ. ‘D56’ ಎಂದು ಹೇಳಲಾಗಿದ್ದು, ವಿಶೇಷ ಅಂದ್ರೆ ಈ ಚಿತ್ರಕ್ಕೆ ಕನಸಿನ ರಾಣಿ ಮಾಲಾಶ್ರೀ ಮಗಳು ನಾಯಕಿ.
ಈ ಚಿತ್ರದ ಮೂಲಕ ಅನನ್ಯ ಅವರ ಹೆಸರು ರಾಧನಾ ರಾಮ್ ಎಂದು ಜನರಿಗೆ ಪರಿಚಯವಾಗಲಿದೆ.
ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮೋಡಿ ಮಾಡಿದ್ದ ನಟಿ ಮಾಲಾಶ್ರೀ. ಇದೀಗ ಅವರ ಮಗಳು ಕೂಡ ಚಂದನವನ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.