ಕಾಮನ್ವೆಲ್ತ್ ಗೇಮ್ಸ್ 2022 : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದರ. ಕುಸ್ತಿಯ ಪುರುಷರ 65 ಕೆಜಿ ವಿಭಾಗದ ಫೈನಲ್ ನಲ್ಲಿ ಭಾರತದ ಬಜರಂಗ್ ಪೂನಿಯಾ ಚಿನ್ನಕ್ಕೆ ಕೊರಳೊಡ್ಡಿದರು.
ಫೈನಲ್‌ನಲ್ಲಿ ಕೆನಡಾದ ಲಚ್ನಾಲ್ ಮೆಕ್‌ನೀಲ್ ಅವರನ್ನು 9-2 ರಿಂದ ಸೋಲಿಸಿ ಬಜರಂಗ್ ಚಿನ್ನದ ಪದಕ ಗೆದ್ದರು. ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಪದಕ ಗೆದ್ದರು. ಕಳೆದ ಬಾರಿಯೂ ಅವರು ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು
ಭಾರತದ 21 ವರ್ಷದ ಕುಸ್ತಿಪಟು ಅನ್ಶು ಮಲಿಕ್ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
Advertisement. Scroll to continue reading.
ಫೈನಲ್ʼನಲ್ಲಿ ಅನ್ಶು 6-4ರಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಪರಾಭವಗೊಂಡರು.