ಕಾಮನ್‌ವೆಲ್ತ್ ಗೇಮ್ಸ್ 2022 : ಬಹ್ವಿನಾ ಪಟೇಲ್ ಅವರು ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಅತ್ಯುತ್ತಮ ಆಟ ಪ್ರದರ್ಶಿಸಿದ ಪಟೇಲ್, 12-10, 11-2, 11-9 ರಲ್ಲಿ ಇಕ್ಪಿಯೊಯಿ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಮೂರು ಸುತ್ತುಗಳಲ್ಲಿಯೂ ಅಮೋಘ ಪ್ರದರ್ಶನ ತೋರಿದ ಬಹ್ವಿನಾ ಪಟೇಲ್, ಅಂತಿಮವಾಗಿ ಐತಿಹಾಸಿಕ ಸಾಧನೆ ಮೆರೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಮತ್ತೋರ್ವ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ಬೆನ್ ಮನುಭಾಯ್ ಪಟೇಲ್ ಅವರು ಇಂಗ್ಲೆಂಡ್‌ನ ಸ್ಯೂ ಬೈಲಿಯನ್ನು ಸೋಲಿಸಿ ಕಂಚಿನ ಪದಕ ಪಡೆದರು. ಇವರು ಸ್ಯೂ ಬೈಲಿ ಅವರನ್ನು 11-5, 11-2, 11-3 ಅಂಕಗಳಿಂದ ಸೋಲಿಸಿದರು.
Advertisement. Scroll to continue reading.
ಪುರುಷರ 67 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಭಾರತದ ಬಾಕ್ಸರ್ ರೋಹಿತ್ ಟೋಕಾಸ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಜಾಂಬಿಯಾದ ಸ್ಟೀಫನ್ ಜಿಂಬಾ ವಿರುದ್ಧ ಸೋತ ಬಾಕ್ಸರ್ ರೋಹಿತ್ ಟೋಕಾಸ್ ಪುರುಷರ 67 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ಜೈಸ್ಮಿನ್ ಲಂಬೋರಿಯಾ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಮೊದಲ ಎರಡು ಪದಕಗಳನ್ನು ಗೆದ್ದುಕೊಂಡಿದ್ದಾರೆ.
Advertisement. Scroll to continue reading.