ಬ್ರಹ್ಮಾವರ : ಬದ್ಧತೆ ಮತ್ತು ನಿಖರತೆಯಲ್ಲಿ ಯಾವತ್ತೂ ಬದಲಾಗದ ವ್ಯಕ್ತಿ ಸಿದ್ಧರಾಮಯ್ಯ : ಅಮೀನ್ ಮಟ್ಟು
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಮ ಸಮಾಜದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತ ಬಲ್ಲ ಏಕೈಕ ವ್ಯಕ್ತಿ ಸಿದ್ಧರಾಮಯ್ಯನವರು ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು. ಭಾನುವಾರ ಬ್ರಹ್ಮಾವರ ಬಂಟರ ಭವನದಲ್ಲಿ ಕರ್ನಾಟಕ ಭಾಗ್ಯವಿದಾತ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಅಮೃತ ಮಹೋತ್ಸವ ಪ್ರಯುಕ್ತ ಜನನಾಯಕ ಸಿದ್ಧರಾಮಯ್ಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಬದ್ಧತೆ ಮತ್ತು ನಿಖರತೆಯನ್ನು ಅವರು ಯಾವತ್ತೂ ಬದಲಾಗದ ವ್ಯಕ್ತಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಮತಾಂಧ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿಯಾಗ ಬಲ್ಲ ಸಿದ್ಧರಾಮಯ್ಯನವರನ್ನು ಕರಾವಳಿ ಜಿಲ್ಲೆಗೆ ಪರಿಚಯಿಸ ಬೇಕಾಗಿದೆ ಎಂದರು.
ಲೇಖಕ ಬಿ.ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು.
Advertisement. Scroll to continue reading.
ಮುಖ್ಯ ಅತಿಥಿಗಳಾಗಿ ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ನಿರಂಜನ ಹೆಗ್ಡೆ, ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಜನಾಬ್ ಕೋಟ ಇಬ್ರಾಹಿಂ ಸಾಹೇಬ್, ಕೆಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್ ಮಿನೇಜಸ್, ಸಾಮಾಜಿಕ ಹೋರಾಟಗರ‍್ತಿ ಗೌರಿ ಕೆಂಜೂರು, ಸಾಸ್ತಾನ ಸಿ.ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಪಿಎಸ್, ಅಂಜಲಿ ಆಸ್ಪತ್ರೆಯ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ನ್ಯಾಯವಾದಿ ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಹೆಮ್ಮಾಡಿ ಸಹಕರಿಸಿದರು. ಇದಕ್ಕೂ ಮುನ್ನ ಡಾ.ಗಣೇಶ್ ಗಂಗೊಳ್ಳಿ ಮತ್ತು ತಂಡದವರಿAದ ದೇಶ ಭಕ್ತಿಗೀತೆ ಜರಗಿತು.
ಸಿದ್ಧರಾಮಯ್ಯ ಅವರ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.