ಬೈಂದೂರು : ಶಾಲೆಯಿಂದ ಮನೆಗೆ ಬರುತ್ತಿದ್ದ ಸಂದರ್ಭ ಕಾಲು ಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ವಿದ್ಯಾರ್ಥಿನಿ ನೀರು ಪಾಲಾದ ಘಟನೆ ಇಂದು ಸಂಜೆ ಕಾಲ್ತೋಡು ಗ್ರಾಮದ ಚಪ್ಪರಿಕೆಯಲ್ಲಿ ನಡೆದಿದೆ.
ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ(7) ನೀರು ಪಾಲಾದ ವಿದ್ಯಾರ್ಥಿನಿ.
Advertisement. Scroll to continue reading.
ಸನ್ನಿಧಿ ಸ.ಹಿ.ಪ್ರಾ. ಶಾಲೆ ಚಪ್ಪರಿಕೆಯಲ್ಲಿ ಎರಡನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯಿಂದ ಮನೆಗೆ ಬರುವ ವೇಳೆ ಬೀಜಮಕ್ಕಿಯ ಕಾಲು ಸಂಕದಲ್ಲಿ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಈ ಹಳ್ಳವು ಬೋಳಂಬಳ್ಳಿ ನದಿಗೆ ಸೇರುತ್ತದೆ. ಮಳೆಯ ಕಾರಣ ನೀರಿನ ರಭಸ ಜೋರಾಗಿದೆ. ಹೀಗಾಗಿ ನೀರಿನ ಸೆಳೆತಕ್ಕೆ ಬಾಲಕಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು, ಬಾಲಕಿಗಾಗಿ ತೀವ್ರ ಶೋಧ ನಡೆಯುತ್ತಿದೆ.