ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾರಕೂರು ಹೊಸಾಳ ಬ್ರಹ್ಮ ಬೈದರ್ಕಳ ಗರಡಿಗೆ ದೇಣಿಗೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾರಕೂರು ಹೊಸಾಳ ಬ್ರಹ್ಮ ಬೈದರ್ಕಳ ಗರಡಿಗೆ, ಶ್ರೀ ಕ್ಷೇತ್ರದಿಂದ ೨,೫೦,೦೦೦/- ಲಕ್ಷದ ಡಿಡಿಯನ್ನು ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್‌ರವರು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಿದರು.
ಜಿಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಬಿ. ಸೀತಾರಾಮ್ ಶೆಟ್ಟಿ, ಉಪಾಧ್ಯಕ್ಷ ರಘು ಗರಡಿಮನೆ , ಪ್ರಧಾನ ಕಾರ್ಯದರ್ಶಿ ರಕ್ಷಿತ್, ಪ್ರಧಾನ ಅರ್ಚಕರಾದ ರಘು ಪೂಜಾರಿ, ಸಮಿತಿಯ ಸದಸ್ಯರಾದ ಅಶೋಕ್ ಪೂಜಾರಿ, ಮಹಾಬಲ ಪೂಜಾರಿ, ಸಂತೋಷ್ ಪೂಜಾರಿ ಮಂಜುನಾಥ್ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕಿ ಬಾಬಿ ಎಂ, ಸೇವಾ ಪ್ರತಿನಿಧಿ ರೇವತಿ, ಒಕ್ಕೂಟದ ವಲಯ ಅಧ್ಯಕ್ಷೆ ಗೌರಿ, ಒಕ್ಕೂಟದ ಮಾಜಿ ಅಧ್ಯಕ್ಷ ಸುರೇಶ್ ಗರಡಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.