ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಬಳಿ ಅಗಸ್ಟ ೩೧ ರಂದು ನಡೆಯುವ ಗಣೇಶ ಚೌತಿಗೆ ಸಾರ್ವಜನಿಕ ಮತ್ತು ಮನೆಯಲ್ಲಿ ಪೂಜಿಸುವ ಮಣ್ಣಿನ ಗಣಪತಿ ವಿಗ್ರಹ ರಚನಾ ಕಾರ್ಯ ಒಂದು ವಾರದಿಂದ ನಡೆಯುತ್ತಿದೆ.
ಕಳೆದ ೨೦ ವರ್ಷದಿಂದ ಇಲ್ಲಿನ ವೆಂಕಟೇಶ ನಾಯಕ್ ಆವೆ ಮಣ್ಣನ್ನು ಹದಗೊಳಿಸಿ, ತೆಂಗಿನ ನಾರು ಬಳಸಿ ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಹಲವಾರು ಸಹಾಯಕರು ಹಗಲಿರುಳು ಎನ್ನದೆ ವಿಗ್ರಹ ರಚನೆಯಲ್ಲಿ ಕಾಯಕದಲ್ಲಿದ್ದಾರೆ.
ಮಣ್ಣನ್ನು ಹದಗೊಳಿಸಿ ಮೃದು ಆದ ಬಳಿಕ ವಿಗ್ರಹ ರಚನೆಗೆ ಬೇಕಾದಂತೆ ಅಂಗಾಂಗ ರಚನೆ ಮಾಡಬೇಕಾಗುತ್ತದೆ. ಮಳೆ ಜಾಸ್ತಿ ಇದ್ದರೆ ಸರಿಯಾಗಿ ಒಣಗದೆ ಬೇರೆ ಅಂಗಗಳ ರಚನೆ ಕಷ್ಟ ಸಾಧ್ಯವಾದ ಕಾರಣ ಅವಧಿ ಒಳಗೆ ವಿಗ್ರಹ ರಚನೆ ಕಾರ್ಯ ಒಂದು ರೀತಿಯಲ್ಲಿ ಸವಾಲು.
ಒಂದು ಅಡಿಯಿಂದ ಆರು ಅಡಿ ಎತ್ತರದ ವಿಗ್ರಹಗಳು ಇಲ್ಲಿ ರಚನೆಯಾಗುತ್ತದೆ. ಬ್ರಹ್ಮಾವರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಹಲವಾರು ಭಾಗದಲ್ಲಿ ಪೂಜೆಗೊಳ್ಳುವ ೫೦ ವಿಗ್ರಹಗಳು ವೆಂಕಟೇಶ್ ನಾಯಕರಿಂದ ರಚನೆಗೊಳ್ಳುತ್ತದೆ.
ಶಾಲಾ ದಿನದಲ್ಲಿ ಇವರ ಅಜ್ಜನಿಂದ ಕಲಿತ ವಿಗ್ರಹ ರಚನೆ ಕಾರ್ಯ ಶಾರದೋತ್ಸವ ಸಮಯದಲ್ಲಿ ಶಾರದಾ ವಿಗ್ರಹವನ್ನು ಮಾಡುತ್ತಿದ್ದು ಸ್ವತಂತ್ರವಾಗಿ ೨೦ ವರ್ಷದಿಂದ ಮಾಡುತ್ತಿದ್ದಾರೆ.
ಬೇರೆ ಸಮಯದಲ್ಲಿ ಪೈಂಟಿಂಗ್ ಕೆಲಸ ಮಾಡುವ ವೆಂಕಟೇಶ್ ನಾಯಕ್ ವಿಗ್ರಹ ರಚನೆ ಸಮಯದಲ್ಲಿ ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಸೇವೆ ಹಾಗೂ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ.
ಮಣ್ಣಿನಲ್ಲಿ ಮಾಡುವ ವಿಗ್ರಹ ರಚನೆ ತುಂಬಾ ಸೂಕ್ಷ್ಮ ಮತ್ತು ಸವಾಲಿನ ಕೆಲಸ. ಇದು ನನಗೆ ದೇವರ ದಯೆಯಿಂದ ಒಲಿದ ಕಲೆ ಎನ್ನುವ ದೃಷ್ಠಿಯಲ್ಲಿ ಮಾಡುತ್ತೇನೆ. ಹಲವಾರು ಭಕ್ತರು ಪೂಜಿಸುವ ದೇವರನ್ನು ರಚಿಸುವುದು ಕೂಡಾ ಒಂದು ಭಾಗ್ಯ.ವೆಂಕಟೇಶ್ ನಾಯಕ್ ಬ್ರಹ್ಮಾವರ, ಗಣಪತಿ ವಿಗ್ರಹ ರಚನೆಕಾರ
Advertisement. Scroll to continue reading.