ಬೈಂದೂರು : ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಸನ್ನಿಧಿ (7) ಮೃತದೇಹ ಪತ್ತೆಯಾಗಿದೆ.
ಮಕ್ಕಿಮನೆ ನಿವಾಸಿಯಾದ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ
ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಕಾಲುಸಂಕದಿಂದ ಆಯಾತಪ್ಪಿ ನೀರಿಗೆ ಬಿದ್ದಿದ್ದಳು. ಆಕೆಗಾಗಿ ನಿರಂತರ ಶೋಧ ಕಾರ್ಯ ನಡೆಸಲಾಗಿತ್ತು.
ಇದೀಗ ಇಂದು ಸಂಜೆ ಬಾಲಕಿ ಮೃತದೇಹ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಪೊದೆಯ ಬಳಿ ಪತ್ತೆಯಾಗಿದೆ.
Advertisement. Scroll to continue reading.