ಕರಾವಳಿ

ಹರ್ ಘರ್ ತಿರಂಗ ಧ್ವಜ ತಯಾರಿಗೆ ಉಚಿತವಾಗಿ ನೆರವಿಗೆ ಬಂದ ಬ್ರಹ್ಮಾವರ ಟೈಲರ್ಸ್; ತಾಲೂಕು ಆಡಳಿತದಿಂದ ಮೆಚ್ಚುಗೆ

4

ವರದಿ : ಬಿ.ಎಸ್. ಆಚಾರ್ಯ

ಬ್ರಹ್ಮಾವರ : ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಸಂಭ್ರಮ. ಈ ಬಾರಿ ಹರ್ ಘರ್ ತಿರಂಗ ದೇಶದಾದ್ಯಂತ ಅಗಸ್ಟ್ ೧೩ ರಿಂದ ೧೫ ರ ತನಕ ದೇಶದ ಎಲ್ಲೆಡೆಯಲ್ಲಿ ಧ್ವಜ ಹಾರಾಟದ ಸಂಬ್ರಮ ಆಚರಣೆ ಮಾಡುವ ಸಂದರ್ಭದಲ್ಲಿ ಧ್ವಜದ ತಯಾರಿಯಲ್ಲಿ ಬ್ರಹ್ಮಾವರ ಟೈಲರ ವೃತ್ತಿಯವರಿಂದ ರಾಷ್ಟ್ರ ಪ್ರೇಮ ಮೂಡಿ ಬಂದಿದೆ.

ಇತ್ತೀಚೆಗೆ ಟೈಲರ್ಸ್‌ ಅನೇಕ ಬೇಡಿಕೆಯನ್ನು ಮುಂದಿರಿಸಿ ಒಂದು ದಿನ ಬಂದ್ ಮಾಡಿ ರಾಜ್ಯದ ಎಲ್ಲಾ ಭಾಗದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಮಾಡಿದ್ದರೂ ಸರಕಾರದ ಸ್ಥಳಿಯಾಡಳಿತದ ಬೇಡಿಕೆಗೆ ಸ್ಪಂದಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಉಡುಪಿ ಜಿಲ್ಲಾಡಳಿತ ಬ್ರಹ್ಮಾವರ ತಾಲೂಕಿಗೆ ೯,೦೦೦ ದ್ವಜವನ್ನು ನೀಡಿದ್ದು, ಅದರಲ್ಲಿ ತಯಾರಾದ ಧ್ವಜದಲ್ಲಿ ಹಲವಾರು ತೊಡಕುಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವಧಿಯ ಒಳಗೆ ಎಲ್ಲಾ ಕಡೆ ಧ್ವಜ ನೀಡುವ ಬಗ್ಗೆ ಬ್ರಹ್ಮಾವರ ತಹಶೀಲ್ದಾರ ರಾಜ ಶೇಖರ ಮೂರ್ತಿಯವರು ಸರಿಪಡಿಸುವ ಕುರಿತು ಚಿಂತಾಕ್ರಾಂತರಾಗಿದ್ದರು.
ಕಂದಾಯ ನೀರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಬ್ರಹ್ಮಾವರ ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ತಹಶೀಲ್ದಾರ ಕಛೇರಿ ಬಳಿ ಇರುವ ಪವಿತ್ರ ಟೈಲರ್ ಬಳಿ ಸಮಸ್ಯೆ ಹೇಳಿದರು.

ಕಲಿತ ವೃತಿಯನ್ನು ಬಿಟ್ಟು ಬೇರೆ ವೃತ್ತಿ ಮಾಡಲು ಅಸಾಧ್ಯವಾಗಿ ಹಲವಾರು ಸಮಸ್ಯೆಗಳ ನಡುವೆ ಬದುಕು ಕಟ್ಟಿಕೊಂಡ ಇಲ್ಲಿನ ಹಲವಾರು ಟೈಲರ್ಸ್‌ಗಳು ಸ್ಥಳೀಯಾಡಳಿತದ ಸಮಸ್ಯೆಗೆ ಪವಿತ್ರ ಟೈಲರ್ಸ್ ಕೂಡಲೇ ಸ್ಪಂದಿಸಿ ಟೈಲರ್ಸ್ ಅಸೋಶೀಯೇಶನ್ ನ ಸದಸ್ಯರಿಗೆ ಮಾಹಿತಿ ರವಾನಿಸಿ ಬ್ರಹ್ಮಾವರ ನಗರ ಭಾಗದ ಹಲವಾರು ಟೈರರ್ಸ್‌ಗಳ ಮೂಲಕ ಕೇವಲ ಕೆಲವೇ ಗಂಟೆಯಲ್ಲಿ ೫೧೯೯ ಧ್ವಜವನ್ನು ಅಳತೆಗೆ ಸರಿಯಾಗಿ ಮತ್ತು ಆಕಾರಕ್ಕೆ ಸರಿಯಾಗಿ ಮಾಡಿ ಸಂಘಟನೆ ಮೂಲಕ ರಾಷ್ಟ್ರ ಪ್ರೇಮ ಮೆರೆದಿದ್ದಾರೆ.

Advertisement. Scroll to continue reading.

ಪ್ರಪಂಚ ಆಧುನಿಕವಾಗಿ ಎಷ್ಟೇ ಮುಂದುವರಿದರೂ ಕೂಡಾ ಮಾನವರಲ್ಲಿರುವ ಮಾನವೀಯತೆಯ ಗುಣ ಯಂತ್ರದಲ್ಲಿ ಇರದು. ಅದೆಷ್ಟೋ ಗಾರ್ಮೆಂಟ್‌ಗಳು ಬಂದು ಟೈಲರ್ಸ್ ವೃತ್ತಿಗೆ ಮತ್ತು ಅವರ ಬದುಕಿಗೆ ಮಾರಕವಾಗಿದೆ ಆದರೆ ಮಾನವೀಯತೆ ಮಾಯವಾಗಿಲ್ಲ ಗುರುವಾರ ವಿತರಣೆ ಮಾಡ ಬೇಕಾದ ಧ್ವಜಗಳನ್ನು ಇಲ್ಲಿನ ಟೈಲರ್ಸ್ ಸಮಯಕ್ಕೆ ಸರಿಯಾಗಿ ಉಚಿತವಾಗಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ.
ರಾಜಶೇಖರ ಮೂರ್ತಿ, ಬ್ರಹ್ಮಾವರ ತಾಲೂಕು ತಹಶೀಲ್ದಾರ್

ಒಬ್ಬರಿಗೆ ಒಬ್ಬರು ಪರಿಚಿತರಾಗಿಲ್ಲದ ಸಮಯದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಶನ್ ಮಾಡಿದ ಸಂಘಟನೆ ಮೂಲಕ ಸಂಘಟಿತರಾಗಿದ್ದೇವೆ. ಇಂತಹ ಕೆಲಸ ಕೂಡಾ ಸಂಘಟನೆಕಾರಣವಾಗಿದೆ. ಸರಕಾರ ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು.
ಪವಿತ್ರ ಟೈಲರ್ಸ್ ಮಾರಿಗುಡಿ ಬಳಿ ಬ್ರಹ್ಮಾವರ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com