ಬಿಜೆಪಿ ಯುವ ಮೋರ್ಚಾ ಕುಂದಾಪುರ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ರಾಷ್ಟ್ರ ಧ್ವಜ ವಿತರಣೆ
Published
1
ಕುಂದಾಪುರ : ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಕರೆಯಂತೆ ದೇಶಾದ್ಯಂತ “ಹರ್ ಘರ್ ತಿರಂಗ – ಮನೆ ಮನೆಯಲ್ಲಿ ತ್ರಿವರ್ಣ” ಅಭಿಯಾನ ನಡೆಯುತ್ತಿದ್ದು, ಬಿಜೆಪಿ ಯುವ ಮೋರ್ಚಾ ಕುಂದಾಪುರ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಕುಂದಾಪುರ ಪೌರ ಕಾರ್ಮಿಕರ ವಸತಿ ಮತ್ತು ಅಂಬೇಡ್ಕರ್ ಕಾಲೋನಿ ಶಾಸ್ತ್ರಿ ಸರ್ಕಲ್,ಕೆ ಎಸ್ ಆರ್ಟಿಸಿ ಸಿಬ್ಬಂದಿಗಳಿಗೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ರಾಷ್ಟ್ರ ಧ್ವಜ ವಿತರಿಸಿ ಶುಭಕೋರಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಕಡ್ಗಿಮನೆ, ಯುವಮೋರ್ಚಾ ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸಂಪತ್ ಶೇರಿಗಾರ್, ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಸುನಿಲ್ ಖಾರ್ವಿ,ಯುವಮೋರ್ಚಾ ಉಪಾಧ್ಯಕ್ಷ ರಾಘು ಮದ್ದುಗುಡ್ಡೆ, ಯುವಮೋರ್ಚಾ ನಗರ ಮಹಾಶಕ್ತಿಕೇಂದ್ರದ ಪ್ರಧಾನಕಾರ್ಯದರ್ಶಿ ಸಂದೇಶ್ ಪೂಜಾರಿ,ಯುವಮೋರ್ಚಾ ಸದಸ್ಯ ಗೌತಮ್ ಕಲ್ಲಾಗರ ಮತ್ತಿತರರು ಉಪಸ್ಥಿತರಿದ್ದರು.