ಉಡುಪಿ : ಶ್ರಾವಣ ಮಾಸದ ಪೌರ್ಣಮಿಯಂದು ಮುಂಜಾನೆ ಸೂರ್ಯೋದಯ ಕಾಲದಲ್ಲಿ ಉಡುಪಿಯ ಚಂದ್ರಮೌಳೀಶ್ವರ ದೇವಳದಲ್ಲಿ ಅರ್ಚಕರು ಹಾಗೂ ವೇದಮೂರ್ತಿ ಮನೋಹರ ತಂತ್ರಿಯವರ ನೇತೃತ್ವದಲ್ಲಿ ಉತ್ಸರ್ಜನ – ಯಜುರ್ ಉಪಾಕರ್ಮ ಸಾಂಗವಾಗಿ ನೆರವೇರಿದವು.
ದೇವ ಋಷಿ ತರ್ಪಣ, ಯಮತರ್ಪಣ, ಪಿತೃ ತರ್ಪಣ, ನವಕಾಂಡ ಋಷಿಗಳನ್ನು ಮಂಡಲ ಮಧ್ಯೆ ಆಹ್ವಾನಿಸಿ ಹವಿಸ್ಸು ತರ್ಪಣಾದಿ ಕಾರ್ಯಕ್ರಮಗಳು, ಯಜ್ಞೋಪವೀತ ಧಾರಣೆಗೆ ಸಂಬಂಧಪಟ್ಟಂತೆ ಹೋಮ ಹವನಾದಿಗಳು ದಾನ ಧಾರಣೆಗಳು ಕ್ರಮವತ್ತಾಗಿ ಸಂಪನ್ನಗೊಂಡಿತು. ತದ ನಂತರ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ದೇವ ಋಷಿ ಪಿತೃ ತರ್ಪಣ ಸಲ್ಲಿಸಲಾಯಿತು.
ಎರಡು ನೂತನ ಉಪಾಕರ್ಮದ ವಟುಗಳಿಗೆ ಅಗ್ನಿಕಾರ್ಯ ಇತ್ಯಾದಿ ವಿಧಿ ವಿಧಾನಗಳನ್ನು ನಡೆಸಲಾಯಿತು. ಸುಮಾರು 50 ಕ್ಕೂ ಹೆಚ್ಚು ಯಜುರ್ವೇದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಜ್ಞೋಪವೀತ ಧಾರಣೆ ನಡೆಸಿದರು.