ಬಾರಕೂರು : ಹನೆಹಳ್ಳಿ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ: ರಾಷ್ಟ್ರ ನಾಯಕರ ವೇಷ ಧರಿಸಿ ವಿದ್ಯಾರ್ಥಿಗಳಿಂದ ಜಾಥಾ
Published
0
ವರದಿ : ಬಿ.ಎಸ್.ಆಚಾರ್ಯ
ಬಾರಕೂರು : ಸ್ವಾತಂತ್ರ್ಯೋತ್ಸವದ 75 ನೇ ವರ್ಷ ಆಚರಣೆ ಅಂಗವಾಗಿ ಹರ್-ಘರ್-ತಿರಂಗ ಕಾರ್ಯಕ್ರಮ ಎಲ್ಲೆಡೆಯಲ್ಲಿ ಕೂಡಾ ಹಬ್ಬದ ವಾತಾವರಣ ಕಂಡು ಬಂದಿದೆ.
75 ನೇ ವರ್ಷದ ಆಚರಣೆಯಲ್ಲಿರುವ ಬಾರಕೂರು ಹನೆಹಳ್ಳಿ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ಇಲ್ಲಿನ ವಿದ್ಯಾರ್ಥಿಗಳು ದೇಶದ ಅಮರ ನಾಯಕರುಗಳ ದಿರಿಸು ಧರಿಸಿ ಶಾಲೆಯಿಂದ ಸಾರ್ವ ಜನಿಕವಾಗಿ ಜಾಥಾ ನಡೆಸಿದರು.
ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಒನಕೆ ಓಬವ್ವ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ದೇಶ ಭಕ್ತರನ್ನು ನೆನಪಿಸಿದರು.
ಶಾಲಾ ಮುಖ್ಯೋಪಧ್ಯಾಯರು, ಶಿಕ್ಷಕರು, ಶಿಕ್ಷಕಿಯರು ಮತ್ತು ಪೋಷಕರು ಜಾಥಾದಲ್ಲಿದ್ದರು.