ಕರಾವಳಿ

ಬ್ರಹ್ಮಾವರ ತಾಲೂಕು ಆಡಳಿತದ ವತಿಯಿಂದ ೭೫ ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ತಾಲೂಕು ಆಡಳಿತದ ವತಿಯಿಂದ ೭೫ ನೇ ಸ್ವಾತಂತ್ರ್ಯೋತ್ಸವ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.
ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ಧ್ವಜಾರೋಹಣ ಗೈದರು.
ಈ ಸಂದರ್ಭ ಬ್ರಹ್ಮಾವರ ಕೋಟ ಪೊಲೀಸರಿಂದ ಮತ್ತು ಸ್ಥಳಿಯ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಜರುಗಿತು.


ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ನ್ಯಾಯವಾದಿ ಟಿ. ಬಿ. ಶೆಟ್ಟಿ ಮಾತನಾಡಿ, ೭೫ ವರ್ಷದ ಹಿಂದೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನವಾದ ಮತ್ತು ಆತ್ಮ ಅರ್ಪಣೆ ಮಾಡಿದವರ ಜೀವನ ಚರಿತ್ರೆ ತಿಳಿದು ಅವರ ದೇಶ ಪ್ರೇಮವನ್ನು ನಾವು ಅಳವಡಿಕೊಳ್ಳ ಬೇಕಾಗಿದೆ. ಸ್ವತಂತ್ರ ಅಂದರೆ ಸ್ವೇಚ್ಛೆಯಾಗ ಬಾರದು ಎಂದರು.


ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯಕೀಯದಲ್ಲಿ, ಡಾ. ಪಿ. ವಿ. ಭಂಡಾರಿ, ಮಾಧ್ಯಮದಲ್ಲಿ ಬಂಡೀಮಠ ಶಿವರಾಮ ಆಚಾರ್ಯ , ಸಾಹಿತ್ಯದಲ್ಲಿ ಜಾನಕಿ ಬ್ರಹ್ಮಾವರ , ಕೃಷಿ ಕ್ಷೇತ್ರದಲಿ ಪ್ರಸನ್ನ ಭಟ್ ಮತ್ತು ನಾಟಿ ವೈದ್ಯದಲ್ಲಿ ನೀಲಕಂಠ ವೈದ್ಯ ಮುದ್ದೂರು ಇವರನ್ನು ಸನ್ಮಾನಿಸಲಾಯಿತು.


ನಾನಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.


ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಇಬ್ರಾಹಿಂ ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯ್ಕ್ , ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ , ಪಿ ಎಸ್ ಐ ಗುರುನಾಥ್ ಬಿ ಹಾದಿಮನೆ , ಕೋಟ ಠಾಣೆಯ ಮಧು , ಹಂದಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ನಿರಂಜನ ಪೂಜಾರಿ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಇನ್ನಿತರು ಉಪಸ್ಥಿತರಿದ್ದರು.


ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀನಾರಾಯಣ ಭಟ್ ವಂದಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com