75ನೇ ಸ್ವಾತಂತ್ರ್ಯ ಆಚರಣೆಯ ಸಂಭ್ರಮದಲ್ಲಿ ಪುಟ್ಟ ಹುಡುಗನೊಬ್ಬ ರಾಷ್ಟ್ರಗೀತೆ ಜನ ಗಣ ಮನವನ್ನು ಹಾಡುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವರ್ಟಿಗೋ ವಾರಿಯರ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.
‘ನಮ್ಮ ರಾಷ್ಟ್ರಗೀತೆಯ ಅತ್ಯಂತ ಹೃದಯಸ್ಪರ್ಶಿ ಗಾಯನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ದಿನದ ಶುಭಾಶಯಗಳು’ ಎಂದು ಈ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
Advertisement. Scroll to continue reading.
ಇದು 1 ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಹುಡುಗನ ಮುದ್ದಾದ ಹಾಡುಗಾರಿಗೆ, ಹಾವಾಭಾವ ಕಂಡ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಆತನ ಉಚ್ಚಾರಣೆ ಸರಿ ಇಲ್ಲದಿದ್ದರೂ ಪುಟ್ಟ ಬಾಲಕನ ಹಾಡಿನ ರೀತಿ ಮೋಡಿ ಮಾಡಿದೆ. ಶೇರ್ ಮಾಡಲಾಗುತ್ತಿದೆ.
Advertisement. Scroll to continue reading.