ಕರಾವಳಿ

ಕರ್ಜೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸರಕಾರದ ಪರಿಕಲ್ಪನೆಯಡಿ ಸ್ವಾತಂತ್ರ್ಯೋತ್ಸವ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ದೇಶದ 75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಗ್ರಾಮೀಣ ಭಾಗದ ಕರ್ಜೆ ಗ್ರಾಮ ಪಂಚಾಯತಿ ಗ್ರಾಮ ಸರಕಾರದ ಪರಿಕಲ್ಪನೆಯನ್ನು ಈ ಬಾರಿ ವಿನೂತನವಾಗಿ ಸಾಕಾರಗೊಳಿಸಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ಕರ್ಜೆ ರಾಘವೇಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಗ್ರಾಮ ಸರಕಾರದ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಒಂದೆಡೆಯಲ್ಲಿ ಬೆಸೆದಿದೆ.


ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಪದವೀ ಪೂರ್ವ ಕಾಲೇಜು, ಸರಕಾರಿ ಹೈಸ್ಕೂಲು, ಪ್ರಾಥಮಿಕ ಶಾಲೆ, ಅಂಗನವಾಡಿ, ಸಂಜೀವಿನಿ ಸಂಘ, ಆಶಾ ಕಾರ್ಯಕರ್ತೆಯರು ಸೇರಿ ಗ್ರಾಮಪಂಚಾಯತಿಯಲ್ಲಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರಿಂದ ನಡೆದ ಧ್ವಜಾರೋಹಣದಲ್ಲಿ ಭಾಗಿಯಾಗಿದ್ದರು.


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದವರಿಗೆ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮತ್ತು ರಸ ಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


500 ಮಂದಿ ಒಟ್ಟಾಗಿ ಗ್ರಾಮದ ರಸ್ತೆಯಲ್ಲಿ 4 ಕಿಮೀ ದೂರ ರಾಷ್ಟ್ರ ಧ್ವಜದೊಂದಿಗೆ ಜಾಥಾ ನಡೆಯಿತು.
ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಗಳು ಪುರುಷರು ಬಿಳಿ ಪಂಚೆ ಮತ್ತು ಶರಟು, ಮಹಿಳೆಯರು ಕೇಸರಿ, ಬಿಳಿ, ಹಸಿರು ಸೀರೆಯ ಸಮವಸ್ತ್ರದಲ್ಲಿದ್ದರು.


ಕರ್ಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿರಾಜ್, ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಪದವಿಪೂರ್ವ ಕಾಲೇಜಿನ ಮಹೇಶ್ ಗೌಡ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಸವಿತಾ ಕುಂದರ್, ಹೈಸ್ಕೂಲ್ ನ ಈಶ್ವರ ಅಂಬಿಗ,ಪ್ರಾಥಮಿಕ ಶಾಲೆಯ ಸತೀಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಜಾಥಾದಲ್ಲಿ ಭಾಗವಹಿಸಿದ್ದರು.


ಶಿಕ್ಷಕ ರೋಹಿತ್ ಕುಮಾರ್ ಶೆಟ್ಟಿ ನಿರೂಪಿಸಿದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com