ಕರಾವಳಿ

ಬ್ರಹ್ಮಾವರ ರೋಟರಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ; ರೋಟರಿ ಅಧ್ಯಕ್ಷ ರೊ.ದಿನೇಶ್ ನಾಯರಿ ಉದ್ಘಾಟನೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ರೋಟರಿ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. – ಉಡುಪಿ ಜಿಲ್ಲೆಯ ಬ್ರಹ್ಮಾವರ ವಲಯ ಇವರ ಜಂಟಿ ಅಶ್ರಯದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಸುಮಾರು 50 ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಫೀಲ್ಡ್ ಕ್ಯಾಮರಾವನ್ನು ಅನಾವರಣಗೊಳಿಸಿ, ರೋಟರಿ ಅಧ್ಯಕ್ಷ ರೊ.ದಿನೇಶ್ ನಾಯರಿ ಇವರು ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಹಾಗೂ ಛಾಯಾಗ್ರಾಹಕರಿಗೆ ಶುಭಾಶಯ ಸಲ್ಲಿಸಿದರು.


ತದನಂತರ ಎಲ್ಲರಿಗೂ ಫಿಲ್ಡ್ ಕ್ಯಾಮರಾ ಹಾಗೂ ಅದು ಬಳಸುತ್ತಿದ್ದ ರೀತಿಯ ಬಗ್ಗೆ ಮಾಹಿತಿ ನೀಡಲಾಯಿತು…
ಪ್ರತಿಶ್, ಮೋಹನ್ ಉಡುಪ ಹಾಗೂ ಸುನೀಲ್ ಸನ್ಮಾನಿತರ ಪರಿಚಯ ಸಭೆಗೆ ನೀಡಿದರು.

Advertisement. Scroll to continue reading.

ಛಾಯಾಗ್ರಹಣ ಕ್ಷೇತ್ರದಲ್ಲಿ 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಬ್ರಹ್ಮಾವರ ವಲಯದ ಸ್ಟೀಫನ್ ಲೂವಿಸ್, ಕುಂದಾಪುರ ವಲಯದ ಶ್ರೀಧರ್ ಹೆಗ್ಡೆ ಹಾಗೂ ಉಡುಪಿ ವಲಯದ ನವೀನ್ ಬಲ್ಲಾಳ್ ಇವರನ್ನು ಸನ್ಮಾನಿಸಲಾಯಿತು.


ಸನ್ಮಾನಿತರು ತಮ್ಮ ಛಾಯಾಗ್ರಹಣ ವೃತ್ತಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಬ್ರಹ್ಮಾವರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಕಾಶ್ ಜತ್ತನ್ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರನ್ನೂ ಅಭಿನಂದಿಸಿದರು.
ವೇದಿಕೆಯಲ್ಲಿ ಸೆಂಟ್ರಲ್ ಕಮಿಟಿ ಸದಸ್ಯ ಏರಿಕ್ ಡಿಸೋಜ ಹಾಗೂ ರೋಟರಿ ವೃತ್ತಿಸೇವಾ ನಿರ್ದೇಶಕರಾದ ಉನ್ನತಿ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


ರೋಟರಿ ಕಾರ್ಯದರ್ಶಿ ಛಾಯಾಗ್ರಾಹಕ ಆಲ್ವಿನ್ ಅಂದ್ರಾದೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುನೀಲ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.


ನಂತರ ಛಾಯಾಗ್ರಾಹಕರಿಗೆ ಹಾಗೂ ರೋಟರಿ ಸದಸ್ಯರಿಗೆ ಹಲವಾರು ಮನರಂಜನಾ ಆಟಗಳನ್ನು ಆಡಿಸಿ ಬಹುಮಾನ ನೀಡಲಾಯಿತು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com