ಬ್ರಹ್ಮಾವರ : ನ್ಯಾಯಾಲಯ ನಿರ್ಮಾಣಕ್ಕೆ ನ್ಯಾಯಾಧೀಶ ಶಾಂತವೀರ ಶಿವಪ್ಪರಿಂದ ಸ್ಥಳ ಪರಿಶೀಲನೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ೨ ಹೋಬಳಿ ೫೨ ಗ್ರಾಮವನ್ನು ಹೊಂದಿದ ಬ್ರಹ್ಮಾವರ ತಾಲೂಕು ಕೇಂದ್ರವಾದ ಬಳಿಕ ಇಲ್ಲಿಗೆ ನ್ಯಾಯಾಲಯದ ಬೇಡಿಕೆಯನ್ನು ಮುಂದಿರಿಸಿದ ಕಾರಣ ತಾತ್ಕಾಲಿಕ ನೆಲೆಯ ನ್ಯಾಯಾಲಯ ಮಾಡುವ ಕುರಿತು ಸ್ಥಳ ಪರಿಶಿಲನೆಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತ ವೀರ ಶಿವಪ್ಪ ಗುರುವಾರ ಬ್ರಹ್ಮಾವರಕ್ಕೆ ಬೇಟಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಬಳಿಯ ಹಳೆಯ ಸಮುದಾಯ ಆರೋಗ್ಯ ಕೇಂದ್ರವನ್ನು ಪರಿಶೀಲನೆ ನಡೆಸಿ, ಬಳಿಕ ಖಾಯಂ ನ್ಯಾಯಾಲಯಕ್ಕೆ ವಾರಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಮೀಸಲಿರಿಸಿದ ಸರಕಾರಿ ಜಾಗದ ಸ್ಥಳ ಪರಿಶೀಲನೆ ಮಾಡಿದರು.
ಬಳಿಕ ಇಲ್ಲಿನ ಹಳೆ ಸಮುದಾಯ ಆರೋಗ್ಯ ಕೇಂದ್ರವನ್ನು ಸರಿಪಡಿಸಿ ತಾತ್ಕಾಲಿಕ ನ್ಯಾಯಾಲಯ ಮಾಡಲು ಉಡುಪಿ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಣಾಧಿಕಾರಿ ಜಗದೀಶ್ ಭಟ್ರವರಿಗೆ ಸೂಚಿಸಿದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಬ್ರಹ್ಮಾವರ ವಕೀಲರ ಸಮಿತಿಯ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಶ್ರೀಪಾದ ರಾವ್ , ವಿಜಯ ಹೆಗ್ಡೆ , ನಾಗರಾಜ್ ಬಿ, ಮನೋಹರ ಶೆಟ್ಟಿ , ಲಕ್ಷ್ಮಣ ಶೆಟ್ಟಿ ಕರ್ಜೆ, ಬಾಲಕೃಷ್ಣ ಶೆಟ್ಟಿ ಸೇರಿದಂತೆ ಹಿರೀಯ ಕಿರೀಯ ವಕೀಲರು ಹಾಜರಿದ್ದರು.