ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಸಿದ್ಧರಾಮಯ್ಯ ಅವರ ಸಾಧನೆಯನ್ನು ಸಹಿಸಲಾಗದೆ ಅವರ ಕಾರಿಗೆ ಮೊಟ್ಟೆ ಎಸೆವ ಕೆಲಸವನ್ನು ಮಾಡಲಾಗಿದೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.
ಕೃತ್ಯ ಎಸಗಿದ್ದು ತಪ್ಪು, ಆತನಿಗೆ ಶಿಕ್ಷೆಯಾಗಬೇಕಿತ್ತು. ಆದರೆ, ಆತನನ್ನು ಕೂಡಲೇ ಸ್ಟೇಷನ್‌ನಿಂದ ಹೊರ ಬಿಟ್ಟಿದೆ. ಇದು ಸರ್ಕಾರದ ಹುನ್ನಾರ. ಈ ರೀತಿ ಕಿರುಕುಳ ಕೊಟ್ಟು ವಿರೋಧ ಪಕ್ಷವನ್ನು ದಮನ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಇದನ್ನು ಪ್ರತಿಭಟಿಸುವ ಮೂಲಕ ಎಚ್ಚರಿಕೆ ನೀಡುತ್ತದೆ ಎಂದರು.
ದಾವಣಗೆರೆಯಲ್ಲಿ ಸಿದ್ಧರಾಮಯ್ಯೋತ್ಸವದ ಯಶಸ್ಸಿನಿಂದ ಹತಾಶರಾಗಿ, ಮುಂದೆ ತಮ್ಮ ಸರ್ಕಾರ ಬರುವುದಿಲ್ಲ ಎಂದು ಈ ರೀತಿ ಗಲಬೆ ಮಾಡಿ, ಸಿದ್ದರಾಮಯ್ಯ ಅವರ ಮನೋಭಾವನೆ ತಗ್ಗಿಸುವ ದುರಾಲೋಚನೆ ಇದೆ. ಅದು ಆಗುವುದಿಲ್ಲ. ಸಿದ್ಧರಾಮಯ್ಯ ಅವರು ಇನ್ನು ಹೆಚ್ಚು ಜನರ ಬಳಿ ಹೋಗಿ ಕಾಂಗ್ರೆಸ್ ಕಟ್ಟುವ, ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ ಎಂದರು.
Advertisement. Scroll to continue reading.