ಬ್ರಹ್ಮಾವರ : ನವಕಿರಣ್ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ, ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ ೨೮ನೇ ವರ್ಷದ ರಾಜ್ಯ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ಶನಿವಾರ ಬ್ರಹ್ಮಾವರ ಭಂಟರ ಭವನದಲ್ಲಿ ಜರುಗಿತು. ಶಂಕರಪುರ ಸಾಯಿಮಂದಿರದ ಶ್ರೀಸಾಯಿ ಈಶ್ವರ ಸ್ವಾಮಿಜೀ ದೀಪ ಬೆಳಗಿಸಿ ಉದ್ಘಾಟಿಸಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Advertisement. Scroll to continue reading.
ಸಮಾಜಸೇವಕ ಪ್ರಖ್ಯಾತ ಶೆಟ್ಟಿ, ಸವಿತಾ ಶೆಣೈ, ನವಕಿರಣ್ ದ ಅಧ್ಯಕ್ಷ ಗಿರೀಶ್.ಬಿ. ಕಾರ್ಯದರ್ಶಿ ಉಮೇಶ ಪೂಜಾರಿ, ನವತಾರೆಯ ಅಧ್ಯಕ್ಷೆ ಅನುರಾಧ ವಿಘ್ನೇಶ್ ಉಪಸ್ಥಿತರಿದ್ದರು.
೩ ವಿಭಾಗದ ಸ್ಪರ್ಧೆ ಯಲ್ಲಿ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ನಿಮ್ರಾ, ಉಮರ್ರಾ ಹಾಗೂ ಮುಹೀರಾ ಸೇರಿದಂತೆ ೩೩೧ ಮಕ್ಕಳು ಶ್ರೀ ಕೃಷ್ಣನ ನಾನಾ ಲೀಲೆಯಿಂದ ರಂಜಿಸಿದರು.