ಚಿತ್ರದುರ್ಗ : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಬೆಂಗಳೂರು ಮೂಲದ ಭೂಮಿಕಾ(22) ಸಿಂಚನ(24), ಮನೀಷ್(27) ಮೃತಪಟ್ಟವರು. ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಮನೀಷ್, ಸಿಂಚನ ದಂಪತಿ ಹಾಗೂ ಮನೀಷ್, ಸಹೋದರಿ ಭೂಮಿಕಾ ಸಾವನ್ನಪ್ಪಿದ್ದಾರೆ.
ಉಳಿದಂತೆ ಗಿರಿಧರ್, ಆಶಾ ಹಾಗೂ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement. Scroll to continue reading.
ಬೆಂಗಳೂರಿಂದ ಶಿರಡಿ ಸಾಯಿಬಾಬ ದರ್ಶನಕ್ಕೆ ಐವರು ಸ್ನೇಹಿತರು ತೆರಳುತ್ತಿದ್ದರು. ಈ ವೇಳೆ ದುರಂತ ನಡೆದಿದೆ. ಆದರೆ ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.