ಕುಂದಾಪುರ : ಶ್ರಾವಣ ಮಾಸದ ಕಡೆ ಶನಿವಾರ; ಶ್ರೀಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಂಸದ ಬಿ. ವೈ. ರಾಘವೇಂದ್ರ
Published
1
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಶ್ರಾವಣ ಮಾಸದ ಕಡೆ ಶನಿವಾರದಂದು ಶ್ರೀಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಅವರು ಶ್ರೀ ದೇವರಿಗೆ ಪೂಜೆಯನ್ನು ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಪ್ಪ, ಪುರಸಭೆಯ ಅಧ್ಯಕ್ಷ ರೇಖಾ ಬಾಯಿ, ಹಾಗೂ ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಣುಕಾ ಸ್ವಾಮಿ, ಗೊಬ್ಬರದ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಈಶ್ವರಪ್ಪ, ಉಪಾಧ್ಯಕ್ಷ ಸೋಮಶೇಖರ್, ಗೌರವ ಅಧ್ಯಕ್ಷರು ಹುಚ್ಚಪ್ಪ, ಖಜಾಂಚಿ ತಮ್ಮಣ್ಣನವರ್, ನಟರಾಜ್, ಕಾರ್ಯದರ್ಶಿ ಚಂದ್ರಶೇಖರ್, ಉಪ ಕಾರ್ಯದರ್ಶಿ ಕುಮಾರಸ್ವಾಮಿ, ನಾಗರಾಜ್ ಎಲ್ಲಾ ಪರಿಕರ ಮಾರಾಟಗಾರರು ಮತ್ತಿತರರರು ಉಪಸ್ಥಿತರಿದ್ದರು.