ಕರಾವಳಿ

ಬ್ರಹ್ಮಾವರ : ಆಮೆಗತಿಯಲ್ಲಿದೆ ಕಾಮಗಾರಿ; ಹಂದಾಡಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ ರಸ್ತೆ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ. ಉಡುಪಿ – ಬ್ರಹ್ಮಾವರ – ಬಾರಕೂರು ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ಬ್ರಹ್ಮಾವರ ಬಳಿಯ ಹಂದಾಡಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ರಸ್ತೆ ಮತ್ತು ನೀರು ಹರಿಯುವ ತೊಡು ಬಾಯಿ ತೆರೆದು ನಿಂತಿದೆ.


ಹಲವಾರು ಸಮಯದಿಂದ ಕುಂಟುತ್ತಲೇ ಸಾಗುತ್ತಿರುವ ಇಲ್ಲಿನ ರಸ್ತೆ ಕಾಮಗಾರಿ ಎರಡು ವರ್ಷದಿಂದಲೂ ಒಂದು ಕಿ.ಮೀ ರಸ್ತೆ ಕಾಮಗಾರಿ ನಡೆದಿಲ್ಲ.

Advertisement. Scroll to continue reading.


ಪ್ರತಿದಿನ ಸಹಸ್ರಾರು ವಾಹನಗಳು ಸಂಚರಿಸುವ ಕಿರಿದಾದ ರಸ್ತೆ ಅಗಲೀಕರಣವಾಗುವ ಕಾಮಗಾರಿ ಅದೇಕೋ ಆಮೆಗತಿಯಲ್ಲಿದೆ.


ಹಂದಾಡಿಯಲ್ಲಿ ಹರಿಯುವ ಕಿರು ತೋಡೊಂದಕ್ಕೆ ಸೇತುವೆ ಮತ್ತು ನೀರು ಸರಾಗವಾಗಿ ಹರಿದು ಹೋಗಲು ಮಾಡುತ್ತಿದ್ದ ಕಾಮಗಾರಿ ಭಾಗ ಒಂದು ಭಾಗದಲ್ಲಿ ಮಾತ್ರ ಮಾಡಿ ಇನ್ನೊಂದು ಭಾಗ ಹಾಗೆ ಬಾಯಿ ತೆರೆದುಕೊಂಡಿದ್ದು ಹಲವು ದಿನವಾಗಿದೆ.


ಹಗಲು ಹೊತ್ತಿನಲ್ಲಿ ಅದೇಗೊ ಸಂಚರಿಸಬಹುದು. ಆದರೆ ರಾತ್ರಿ ಹೊತ್ತು ಘನ ವಾಹನ ಅಥವಾ ತಿಳಿಯದವರು ಎರಡು ವಾಹನ ಒಟ್ಟಾಗುವ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಕಾಮಗಾರಿ ನಡೆಯುತ್ತಿರುವ ಕುರಿತು ಬ್ಯಾನರ್ ಆಗಲಿ, ಸೂಚನಾ ಫಲಕವಾಗಲಿ ಇಲ್ಲಿ ಇಲ್ಲ. ಅಪಾಯ ಸಂಭವಿಸುವ ಮೊದಲು ಸೂಕ್ತ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com