ರಾಮನಗರದಲ್ಲಿ ಭಾರೀ ಮಳೆ; ನೀರಿನಲ್ಲಿ ಮುಳುಗಿದ ವಾಹನಗಳು | Video
Published
2
ರಾಮನಗರ : ಜಿಲ್ಲೆಯಲ್ಲಿ ಇಂದು ಹಲವು ಕಡೆ ಮಳೆಯ ಆರ್ಭಟ ಜೋರಾಗಿದೆ. ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಅಬ್ಬರದ ಮಳೆಯಿಂದಾಗಿ ಸಂಗನಬಸವನದೊಡ್ಡಿ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ, ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದು, ದಶಪಥ ಹೆದ್ದಾರಿಯಲ್ಲಿ ಹಲವು ವಾಹನಗಳು ನೀರಿನಲ್ಲಿ ತೇಲುತ್ತಿವೆ. ಕೆಲವು ಮುಳುಗಡೆಯಾಗಿವೆ.
ಚನ್ನಪಟ್ಟಣದ ಬಳಿಯೂ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಹಲವು ಜಮೀನು ಜಲಾವೃತಗೊಂಡಿದೆ.
Advertisement. Scroll to continue reading.
ರಾಮನಗರದಲ್ಲಿ ಭಾರೀ ಮಳೆ; ನೀರಿನಲ್ಲಿ ಮುಳುಗಿದ ವಾಹನಗಳು | Video