ಗಣೇಶ ಹಬ್ಬದ ದಿನ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ರಮ್ಯಾ
Published
1
ಚಂದನ : ಮೋಹಕ ತಾರೆ ರಮ್ಯಾ ಗಣೇಶನ ಹಬ್ಬದ ದಿನ ಸಿಹಿಸುದ್ದಿ ಕೊಡುವುದಾಗಿ ಹೇಳಿದ್ದರು. ಈ ಬಗ್ಗೆ ಸಿನಿ ಪ್ರಿಯರು ಏನಿರಬಹುದು ಎಂದುಸಿಕ್ಕಾಪಟ್ಟೆ ಕುತೂಹಲದಲ್ಲಿದ್ದರು. ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ ಅವರು ನಂತರದಲ್ಲಿ ರಾಜಕೀಯದತ್ತ ಮುಖ ಮಾಡಿದ್ದರು. ಬಳಿಕ ಸಿನಿಮಾದಿಂದಲೂ, ರಾಜಕೀಯದಮದಲೂ ದೂರ ಉಳಿದಿದ್ದಾರೆ. ಇದೀಗ ಮತ್ತೆ ಸಿನಿರಂಗದತ್ತ ಮುಖ ಮಾಡುತ್ತಿದ್ದಾರೆ. ಅದು ನಾಯಕಿಯಾಗಿ ಅಲ್ಲ ಅನ್ನೋದು ವಿಶೇಷ.
ಈಗ ನಿರ್ಮಾಪಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಹೊಸ ಪ್ರೊಡಕ್ಷನ್ ಸ್ಟುಡಿಯೋಸ್ ಮೂಲಕ ನಟಿ ಸಿನಿಮಾಗೆ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement. Scroll to continue reading.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ದುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಂಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯಫಸ್ನ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ.
ಏನಿದು ಆಪಲ್ ಬಾಕ್ಸ್? ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕತವಾದ ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದೆ. ಸೆಟ್ ನಲ್ಲಿ ಕೂಡಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾದ ಅಥವಾ ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸಾದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ ಎಂದು ಬರೆದುಕೊಂಡಿದ್ದಾರೆ.