ಹೇರೂರಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ವಿರೋಧ; ಪ್ರತಿಭಟನಾ ಸಭೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮತದಾರರು ಇದ್ದರೆ ಮಾತ್ರ ಜನನಾಯಕರಾಗಲು ಸಾಧ್ಯ. ಮತದಾರ ವಿರುದ್ಧ ಇರುವ ಯಾವೂದೇ ಜನಪ್ರತಿನಿಧಿಗಳು ಅವರು ಜನವಿರೋಧಿಗಳೇ ಎಂದು ಬ್ರಹ್ಮಾವರದ ಜ್ಞಾನ ವಸಂತ ಶೆಟ್ಟಿ ಹೇಳಿದರು.
ಭಾನುವಾರ ಹೇರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೇರೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ ತ್ಯಾಜ್ಯ ಸಂಸ್ಕರಣ ಘಟಕ ರಚನೆ ಕುರಿತು ಗ್ರಾಮಸ್ಥರಿಂದ ಪ್ರತಿಭಟನಾ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ರಾಜಕೀಯ, ಪಕ್ಷ ಜಾತಿ, ಧರ್ಮ, ಪಂಗಡ ನಂತರ. ಮೊದಲು ಜನವಸತಿ ಜನರು ಇದ್ದರೆ ಮಾತ್ರ ಅದೆಲ್ಲ ಬೇರೆ ಅನೇಕ ಗ್ರಾಮದ ತ್ಯಾಜ್ಯವನ್ನು ಹೇರೂರು ಗ್ರಾಮಕ್ಕೆ ತಂದು ಸುರಿಯುವ ಹುನ್ನಾರಕ್ಕೆ ಇಲ್ಲಿಂದ ಚುನಾಯಿತರಾದ ೧೨ ಮಂದಿ ಗ್ರಾಮ ಪಂಚಾಯತಿ ಸದಸ್ಯರ ಅರಿವಿಗೆ ಬಾರದೆ ಬೇರೆ ಗ್ರಾಮದ ಸದಸ್ಯರ ಮೂಲಕ ಶಾಸಕರಿಗೆ ತಿಳಿದು ಮಾಡುತ್ತಿರುವ ತ್ಯಾಜ್ಯ ಘಟಕವನ್ನು ಈ ಭಾಗದ ಎಲ್ಲ ಜನರೂ ವಿರೋಧಿಸಲೇಬೇಕು ಎಂದರು.
Advertisement. Scroll to continue reading.
ಇಲ್ಲಿನ ಕೃಷಿ ಕೇಂದ್ರದ ಬಳಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮಾಡಲು ಉದ್ದೇಶಿಸಿ ೧೧ ಎಕ್ರೆ ಜಾಗವನ್ನು ಸರ್ವೆ ಮಾಡಲು ಬಂದಾಗಲೇ ಹೇರೂರು ಗ್ರಾಮ ಪಂಚಾಯತಿಯ ೧೧ ಸದಸ್ಯರಿಗೆ ತಿಳಿದು ಬಂದಾಗ ಗ್ರಾಮಸ್ಥರೂ ಭಾರೀ ವಿರೋಧ ವ್ಯಕ್ತ ಪಡಿಸಿದ ಕಾರಣ ಇಂದು ಇಲ್ಲಿನ ಗ್ರಾಮಸ್ಥರು ಹಲವಾರು ಸಂಘ ಸಂಸ್ಥೆಗಳು ಗ್ರಾಮ ಪಂಚಾಯತಿ ಸದಸ್ಯರು ವಿರೋಧ ವ್ಯಕ್ತ ಪಡಿಸಿ ಶಾಸಕರ ವಿರುದ್ಧ ತೀರಾ ಆಕ್ರೋಶ ಹೊರಹಾಕಿದ್ದಾರೆ.
ಜ್ಞಾನ ವಸಂತ ಶೆಟ್ಟಿ , ಬೈಕಾಡಿ ಸುಪ್ರಸಾದ್ ಶೆಟ್ಟಿ , ಸುನಿಲ್ ಸೂಡ ಅಶೋಕ್ ಅಮೀನ್, ಆನಂದ ಭಟ್, ಮಧುಸೂಧನ್ ಹೇರೂರು, ನಾನಾ ಗ್ರಾಮ ಪಂಚಾಯತಿ ಸದಸ್ಯರಾದ ಮೀರಾ ಸದಾನಂದ ಪೂಜಾರಿ, ಪ್ರಭಾಕರ ಶೆಟ್ಟಿ, ಉದಯ ಕಾಮತ್, ಉದಯ ಸುವರ್ಣ ಸೇರಿದಂತೆ ಪಂಚಾಯತಿ ಸದಸ್ಯರುಗಳು ಹಾಜರಿದ್ದರು.