ಬ್ರಹ್ಮಾವರ : ಮುಂದಿನ ಅಧಿವೇಶನದಲ್ಲಿ ಟೈಲರ್ಸ್ ಪರವಾಗಿ ಸದನದಲ್ಲಿ ಧ್ವನಿ ಎತ್ತಲಿದ್ದೇನೆ : ಸಚಿವ ಕೋಟ ಶ್ರಿನಿವಾಸ್ ಪೂಜಾರಿ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮುಂದಿನ ಅಧಿವೇಶನಲ್ಲಿ ಟೈಲರ್ಸ್ ಅವರ ಬೇಡಿಕೆ ಪರವಾಗಿ ಸದನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.
ಭಾನುವಾರ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಶನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ವತಿಯಿಂದ ಮುಂದಿನ ಅಧಿವೇಶನದಲ್ಲಿ ಟೈಲರ್ಸ್ ಅವರ ಬೇಡಿಕೆಯನ್ನು ಈಡೇರಿಸುವಂತೆ ಸದನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವಂತೆ ಅವರ ಮನೆಯಲ್ಲಿ ನೀಡಲಾದ ಮನವಿಗೆ ಅವರು ಸ್ಪಂದಿಸಿ ಮಾತನಾಡಿ, ಕಳೆದ ೨೦ ವರ್ಷದಿಂದ ರಾಜ್ಯದ ಟೈಲರ್ಸ್ ಸಂಘಟನೆಯೊಂದಿಗೆ ಅವಿನಾಭಾವ ಸಂಬಂಧ ಇದ್ದು, ಈ ಹಿಂದೆ ಕೂಡಾ ಅನೇಕ ಬೇಡಿಕೆಯನ್ನು ಸದನದಲ್ಲಿ ಗಮನ ಸೆಳೆದಿದ್ದು, ಈ ಬಾರಿಯ ಅಧಿವೇಶನದಲ್ಲಿ ಕೂಡಾ ರಾಜ್ಯದ ಎಲ್ಲಾ ಟೈಲರ್ಸ್ ಪರವಾಗಿ ಮಾತನಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕುರಿತು ಶ್ರಮಿಸುತ್ತೇನೆ ಎಂದರು.
Advertisement. Scroll to continue reading.
ಜುಲೈ ೨೬ ರಂದು ರಾಜ್ಯದ ಎಲ್ಲಾ ಭಾಗದ ಟೈಲರ್ಸ್ ಒಂದು ದಿನ ಬಂದ್ ಆಚರಿಸಿ, ರಾಜ್ಯದ ಪ್ರತೀ ಜಿಲ್ಲಾಧಿಕಾರಿಗಳಿಗೆ ಹಲವಾರು ಬೇಡಿಕೆಯ ಮನವಿಯನ್ನು ಸಲ್ಲಿಸಲಾಗಿತ್ತು.
ಕ್ಷೇತ್ರ ಸಮಿತಿಯ ಅಧ್ಯಕ್ಷ ನವೀನ ಬಿ.ರಾವ್ ಕೊಕ್ಕರ್ಣೆ , ಕಾರ್ಯದರ್ಶಿ ಕೃಷ್ಣ ದೇವಾಡಿಗ, ಬ್ರಹ್ಮಾವರ ನಗರ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್, ಕೋಟ ವಲಯ ಅಧ್ಯಕ್ಷ ಗಣೇಶ್, ಸಾಸ್ತಾನ ವಲಯ ಅಧ್ಯಕ್ಷೆ ಉಷಾ, ಬಾರಕೂರು ವಲಯದ ಗೌರಿ, ಪೇತ್ರಿ ವಲಯದ ಶ್ರೀಧರ ಆಚಾರ್ಯ, ಕಾರ್ಯದರ್ಶಿ ವೀಣಾ ಇನ್ನಿತರರು ಹಾಜರಿದ್ದರು.