ಚಂದನವನ : ರಿಷಭ್ ಶೆಟ್ಟಿ ಸಿನಿಮಾ ಅಂದ್ರೇನೆ ಕುತೂಹಲ ಮನೆ ಮಾಡಿರುತ್ತದೆ. ಈಗಾಗಲೇ ಅವರು ಕಾಂತಾರ ಚಿತ್ರ ಮಾಡುತ್ತಿದ್ದು, ಸಿನಿಮಾ ಆರಂಭವಾಗುತ್ತಿದ್ದಂತೆ ನಿರೀಕ್ಷೆ ಹೆಚ್ಚಿಸಿದೆ. ಟೀಸರ್ ಮೂಲಕ ಕಾಂತಾರ ಚಿತ್ರದ ನಿರೀಕ್ಷೆ ಹೆಚ್ಚಿಸಿದ್ದ ಅವರು ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.
ಟ್ರೇಲರ್ ನೊಡಿದ್ರೇನೆ ಗೊತ್ತಾಗುತ್ತೆ ಈ ಚಿತ್ರದಲ್ಲಿ ಮತ್ತೊಮ್ಮೆ ಕರಾವಳಿ ಸೊಗಡಿನ ಅನಾವರಣವಾಗಲಿದೆ ಅನ್ನೋದು.
ತುಳುನಾಡಿನಲ್ಲಿ ನಡೆಯುವ ಕಥಾಹಂದರ ಚಿತ್ರದಲ್ಲಿದೆ. ಆ್ಯಕ್ಷನ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅನ್ನೋದು ಪಕ್ಕಾ ಆಗಿದೆ.
Advertisement. Scroll to continue reading.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.
ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರವಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದೆ. ಅಂದಹಾಗೆ, ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ.
Advertisement. Scroll to continue reading.