ಬ್ರಹ್ಮಾವರ : ರುಡ್ ಸೆಟ್ ಸಂಸ್ಥೆ, ಮಹಿಳಾ ಟೈಲರಿಂಗ್ ತರಬೇತಿ ಶಿಬಿರಾರ್ಥಿ ನೇತೃತ್ವದಲ್ಲಿ ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್ ಸರ್ವೀಸಿಂಗ್ ತರಬೇತಿಯ ಶಿಬಿರಾರ್ಥಿಗಳ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್, ಸಂಸ್ಥೆಯ ಹಿರಿಯ ಕಛೇರಿ ಸಹಾಯಕರುಗಳಾದ ಮಧ್ವರಾಜ್ ಭಟ್, ರವಿ ಸಾಲ್ಯಾನ್, ಮಹಿಳಾ ಟೈಲರಿಂಗ್ ತರಬೇತಿಯ ಗೌರವ ಉಪನ್ಯಾಸಕಿ ವೀಣಾ, ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್ ಸರ್ವೀಸಿಂಗ್ ತರಬೇತಿಯ ಗೌರವ ಉಪನ್ಯಾಸಕ ಬಸವರಾಜ್‌ರನ್ನು ಗೌರವಿಸಲಾಯಿತು.
ಅಕ್ಷತಾ ಸ್ವಾಗತಿಸಿ, ಸಹನಾ ವಂದಿಸಿದರು. ಶಾಲಿನಿ, ಸುಶ್ಮಿತಾ, ರಕ್ಷಿತಾ ಪ್ರಾರ್ಥನೆ ಮಾಡಿದರು. ದಿವ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.