ಬ್ರಹ್ಮಾವರ: ಬೆಂಗಳೂರಿನ ವೈಟ್ ಪೀಲ್ಡ್ ಹೊಟೇಲ್ ಫೋಕ್ವಿವ್ ಇಂಟರ್ ನ್ಯಾಷನಲ್ ನಲ್ಲಿ ಜರುಗಿದ ರಾಜ್ಯ ಮಟ್ಟದ ಮಿಸ್ಟರ್ ಎಂಡ್ ಮಿಸ್ ಟೀನ್ ಕರ್ನಾಟಕ ಸ್ಫರ್ಧೆಯಲ್ಲಿ ಬಾರಕೂರು ಹನೆಹಳ್ಳಿಯ ರೀಷಾ ತಾನ್ಯಾ ಪಿಂಟೋ ಗ್ಯಾಂಡ್ ಫಿನಾಲೆಯಲ್ಲಿ ಮಿಸ್ ಟೀನ್ ಫ್ರೇಶ್ ಫೇಸ್ ಆಗಿ ಮೂಡಿಬಂದಳು.
ಈಗಾಗಲೇ ಹಲವಾರು ಕಡೆ ರೂಪದರ್ಶಿಯಾಗಿ ಮುಗ್ಧ ನಗುವಿನಿಂದ ಮನಗೆದ್ದಿರುವ ಈಕೆ ಮಿಸ್ ಟೀನ್ ಸ್ಪರ್ಧೆಯಲ್ಲಿ ಸಾಂಪ್ರದಾಯಕ ಉಡುಗೆ ಮತ್ತು ಆಧುನಿಕ ಉಡುಗೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿ ವಿಜೇತಳಾಗಿರುತ್ತಾಳೆ.
ಮಂಗಳೂರು ಫಾದರ್ ಮಲ್ಲಾರ್‌ನಲ್ಲಿ ಪ್ರಥಮ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿನಿಯಾದ ಈಕೆ ಉಡುಪಿ ಜಿಲ್ಲೆ ಬಾರಕೂರು ಹನೆಹಳ್ಳಿಯ ರೇಷ್ಮಾ ಟೀನಾ ರೋಡ್ರಿಗಸ್ ಮತ್ತು ಮ್ಯಾಕ್ಷಿ ಪಿಂಟೋಯವರ ಪುತ್ರಿ.