ASIAN GAMES : ಇಂದು ನಡೆದ ಏಷ್ಯನ್ ಗೇಮ್ಸ್ನ ಮಿಶ್ರ ಟೆನಿಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಚೈನೀಸ್ ತೈಪೆಯ ಎನ್-ಶುವೊ ಲಿಯಾಂಗ್ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ ಟೈ-ಬ್ರೇಕರ್ನಲ್ಲಿ ರೋಚಕ ಫೈನಲ್ನಲ್ಲಿ ಗೆದ್ದು, ಈ ಜೋಡಿಯು ಚಿನ್ನವನ್ನು ಗೆದ್ದುಕೊಂಡಿತು.
ಮೊದಲ ಸೆಟ್ನಲ್ಲಿ ಸೋತ ನಂತರ ಫೈನಲ್ ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿ ಭಾರತದ ಜೋಡಿ, ಚೈನೀಸ್ ತೈಪೆಯ ಲಿಯಾಂಗ್ ಎನ್-ಶುವೊ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ 2-6, 6-3, 10-4 ಸೆಟ್ ಗಳಿಂದ ಗೆದ್ದು ಚಿನ್ನದ ಪದಕ ಜಯಿಸಿತು.
Advertisement. Scroll to continue reading.