ಬಾಲಿವುಡ್ : ಕಾಸ್ಟಿಂಗ್ ಕೌಚ್ ಬಗ್ಗೆ ಸಿನಿ ಅಂಗಳದಲ್ಲಿ ಮಾತುಗಳು ಕೇಳಿ ಬರುತ್ತಿರುತ್ತದೆ. ನಟಿ ಮಣಿಯರು ಚಿತ್ರರಂಗದಲ್ಲಿ ತಮಗಾದ ಅನುಭವಗಳ ಬಗ್ಗೆ ಹೇಳಿಕೊಳ್ಳುವುದಿದೆ. ಇದೀಗ ನಟಿ ಇಶಾ ಗುಪ್ತಾ ಸರದಿ.
ಇಶಾ ಇತ್ತೀಚಿನ ಸಂದರ್ಶನದಲ್ಲಿ ತಮಗಾದ ಕಹಿ ಅನುಭವದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ನಿರ್ಮಾಪಕರ ಮಾತು ಕೇಳದ್ದಕ್ಕೆ ತಮ್ಮನ್ನು ಸಿನಿಮಾದಿಂದ ಹೊರ ಹಾಕಿದ ಬಗ್ಗೆ ತಿಳಿಸಿದ್ದಾರೆ.
‘ಕಾಸ್ಟಿಂಗ್ ಕೌಚ್’ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ವಿಚಾರ ವೈರಲ್ ಆಗುತ್ತಿದೆ.
Advertisement. Scroll to continue reading.
ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನದಲ್ಲಿ ಇಶಾ ತಮ್ಮ ಸಿನಿ ವೃತ್ತಿಜೀವನದಲ್ಲಿ ಎರಡು ಬಾರಿ ಎದುರಿಸಿದ ಭಯಾನಕ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
“ಸಹ-ನಿರ್ಮಾಪಕರ ಮಾತನ್ನು ನಾನು ನಿರಾಕರಿಸಿದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಇದಾದ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲಿಲ್ಲ. ಏಕೆಂದರೆ ನನ್ನಿಂದ ಅವರಿಗೆ ಏನ್ ಪ್ರಯೋಜನ ಅಂತ ಅವರು ಹೇಳುತ್ತಿದ್ದರು. ಇಬ್ಬರು ಕಾಸ್ಟಿಂಗ್ ಕೌಚ್‌ನ ಬಲೆಗೆ ನನ್ನನ್ನು ದೂಕಲು ಪ್ರಯತ್ನಿಸಿದರು. ಅವರ ಯೋಜನೆ ನನಗೆ ಅರ್ಥವಾಗಿತ್ತು. ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಂದ ಬಚಾವ್ ಆಗಲು ನಾನು ನನ್ನ ಮೇಕಪ್ ಆರ್ಟಿಸ್ಟ್‌ನನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದೆ ಎಂದು ಹೇಳಿದರು.
ಅಲ್ಲದೆ, ಸ್ಟಾರ್ ಮಕ್ಕಳ ಜೊತೆ ಅವರು ಈ ರೀತಿ ಮಾಡಲ್ಲ ಏಕೆಂದರೆ ಅವರ ಪೋಷಕರು ಇಂತಹವರನ್ನು ಕೊಲ್ಲುತ್ತಾರೆ. ನಾವು ಕೆಲಸ ಬೇಕಾದರೆ ಏನ್ ಬೇಕಾದರೂ ಮಾಡುತ್ತೇವೆ ಎಂದು ಇಂತಹವರು ಭಾವಿಸುತ್ತಾರೆ ಎಂದು ನಟಿ ಇಶಾ ಬೇಸರ ವ್ಯಕ್ತಪಡಿಸಿದರು. ಆದರೆ, ಇಶಾ ಎಲ್ಲಿಯೂ ತಮಗೆ ಕಿರುಕುಳ ನೀಡಿದವರ ಹೆಸರು ಬಹಿರಂಗ ಪಡಿಸಿಲ್ಲ.
ಇಶಾ 2007 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್‌ನಲ್ಲಿಯೂ ಸಹ ಸ್ಪರ್ಧಿಸಿದ್ದಾರೆ. ಇಶಾಗೆ ದೇಸಿ ಏಂಜಲೀನಾ ಜೋಲಿ ಎಂದು ಕರೆಯಲಾಗುತ್ತದೆ. ಇಮ್ರಾನ್ ಹಶ್ಮಿ ಅಭಿನಯದ ಜನ್ನತ್ 2 ಮತ್ತು ರಾಝ್ 3 ಚಿತ್ರಗಳೊಂದಿಗೆ ಖ್ಯಾತಿ ಗಳಿಸಿದ ಇಶಾ, ಸೈನಿಕ ಕುಟುಂಬದ ಹಿನ್ನೆಲೆಯಿಂದ ಬಂದವರು. ಆಕೆಯ ತಂದೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ, ಮತ್ತು ಆಕೆಯ ತಾಯಿ ಗೃಹಿಣಿ.
Advertisement. Scroll to continue reading.