ನವದೆಹಲಿ : ಕೆನಡಾದಲ್ಲಿ ಕೊಲೆಯಾದ ಖಾಲಿಸ್ತಾನಿ ಬೆಂಬಲಿಗ ಹರ್ದೀಪ್ ಸಿಂಗ್ ನಿಜ್ಜರ್ ಸಲಿಂಗಕಾಮಿಯಾಗಿದ್ದ. ಅದಕ್ಕಾಗಿ ಅವನನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇಷ್ಟಪಡುತ್ತಿದ್ದರು ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದರೆ ನಿಜ್ಜರ್ ಇನ್ನೊಬ್ಬರಿಗಾಗಿ ಟ್ರುಡೋ ಅವರನ್ನು ದೂರ ಮಾಡಿದ್ದರು. ನಿಜ್ಜರ್ ಕೊಲೆಗೆ ಇದೇ ಕಾರಣವೇ ಎಂದು ಅವರು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
ನಿಜ್ಜರ್ ಪುರುಷರೊಂದಿಗೆ ಇರುವ ಚಿತ್ರಗಳನ್ನೂ ನಿಜ್ಜರ್ ಹಂಚಿಕೊಂಡಿದ್ದಾರೆ.
Advertisement. Scroll to continue reading.
ಈಗಾಗಲೇ ನಿಜ್ಜರ್ ಕೊಲೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿದೆ.
ಪ್ರಕರಣ ಸಂಬಂಧ ಸಾಕ್ಷ್ಯ ಒದಿಗಿಸುವಂತೆ ಕೆನಡಾವನ್ನು ಭಾರತ ಒತ್ತಾಯಿಸಿದೆ.
ಉಭಯ ರಾಷ್ಟ್ರಗಳೂ ರಾಜತಾಂತ್ರಿಕವಾಗಿ ಪ್ರತಿಕಾರದ ಕ್ರಮಗಳನ್ನು ತೆಗೆದುಕೊಂಡಿವೆ. ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿರುವಾಗಲೇ ತೇಜಿಂದರ್ ಈ ಹೇಳಿಕೆ ನೀಡಿದ್ದಾರೆ.
Advertisement. Scroll to continue reading.