ಬ್ರಹ್ಮಾವರ : ವಸುದೈವ ಕುಟುಂಬ ಪರಿಕಲ್ಪನೆಯ ಭಾರತೀಯ ಸಂಸ್ಕೃತಿ ಭೂಭಾಗದ ಯಾವೂದೇ ಜಾಗದಲ್ಲಿ ವಾಸ ಇದ್ದರೂ ಕೂಡಾ ತನ್ನ ಮೂಲ ಸಂಸ್ಕೃತಿಯ ಆಚರಣೆ ಸಂಪ್ರದಾಯ ಮುಂದುವರಿಯುತ್ತಲೇ ಇರುತ್ತದೆ ಎನ್ನುವುದಕ್ಕೆ ಹಲವಾರು ಪುರಾವೆ ಇದೆ.
ವಿದೇಶದ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ನ 5 ನೇ ತರಗತಿ ವಿದ್ಯಾರ್ಥಿನಿ ಯಶಸ್ವೀನಿ ಶಾಸ್ತ್ರೀ ಉದರದಿಂದ ವೇದಗಳು ಅವಳ ಬಾಯಿಯಿಂದ ಹೊರಹೊಮ್ಮುತ್ತವೆ. ರುದ್ರ ಸೂಕ್ತ , ವೇದ ಸೂಕ್ತ , ಪುರುಷ ಸೂಕ್ತ, ಶಿವೋಪಾಸನ ಭಾವಸೂಕ್ತ, ಮಂತ್ರ ಪುಷ್ಪಂಗಳನ್ನು ಅವಳು ಭಾರತೀಯ ಸಂಸ್ಕೃತಿಯ ಕುರಿತು ಆನ್ ಲೈನ್ನಲ್ಲಿ ಕಂಡು, ಕೇಳಿ, ನೋಡಿ ಕಲಿತು ಕೊಂಡಿದ್ದಾಳೆ ಮತ್ತು ಮನೆಯಲ್ಲಿ ದಿನವೂ ಪಠಣ ಮಾಡುತ್ತಾಳೆ.
Advertisement. Scroll to continue reading.
ತಂದೆಯ ಉದ್ಯೋಗ ನಿಮಿತ್ತ ನಾನಾ ದೇಶದಲ್ಲಿ ಶಿಕ್ಷಣ ಪಡೆಯ ಬೇಕಾದ ಕಾರಣ ಆರಂಭಿಕ ಶಾಲಾ ಶಿಕ್ಷಣ ಬ್ರಹ್ಮಾವರ ಜಿ. ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬಳಿಕ 1 ನೇ ತರಗತಿ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ 2,3,4 ಓರ್ಕಿಟ್ ಇಂಟರ್ ನ್ಯಾಷನಲ್ ಸ್ಕೂಲ್ ಬೆಂಗಳೂರು ಶಿಕ್ಷಣ ಪಡೆದು ಇದೀಗ ವಿದೇಶದಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾರತೀಯ ಪರಂಪರೆಯ ವೇದಮಂತ್ರಗಳು ಸರ್ವವ್ಯಾಪಿ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾಳೆ.
ಬ್ರಹ್ಮಾವರ ಬಿರ್ತಿಯ ಸತ್ಯಪ್ರಿಯ ಮತ್ತು ದಕ ಜಿಲ್ಲೆಯ ವಿಟ್ಲದ ಸಾಪ್ಟ್ ವೇರ್ ಇಂಜಿನಿಯರ್ ಇದೀಗ ವಿದೇಶದಲ್ಲಿರುವ ಈಶ್ವರ ಪ್ರಸಾದ್ ಶಾಸ್ತ್ರೀದಂಪತಿ ಮಗಳು ಯಶಸ್ವಿನಿ ಶಾಸ್ತ್ರೀ.