ಕರಾವಳಿ

ಬ್ರಹ್ಮಾವರ : ಉಚಿತ ಕ್ಯಾನ್ಸರ್ ತಪಾಸಣೆ, ತ್ವರಿತ ನೋವು ನಿವಾರಕ ಆಕ್ಯುಪ್ರೆಷರ್ ತರಬೇತಿ ಹಾಗೂ ಚಿಕಿತ್ಸಾ ಶಿಬಿರ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಫ್ರೆಂಡ್ಸ್ ಕ್ಲಬ್ ಸಾಲಿಕೇರಿ ಇವರ ಆಶ್ರಯದಲ್ಲಿ ಸಮುದಾಯ ವೈದ್ಯಕೀಯ ವಿಭಾಗ ಕೆ. ಎಮ್. ಸಿ ಮಣಿಪಾಲ, ಡಿವಿಷನ್ ಆಫ್ ಸಿದ್ಧ, ಸೆಂಟರ್ ಫಾರ್ ಇಂಟಿಗ್ರೆಟಿವಿ ಮೆಡಿಸಿನ್ ರಿಸರ್ಚ್ ಮಾಹೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ ಹಾರಾಡಿಯ ವಿದ್ಯಾ ಮಂದಿರ ಶಾಲೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ತ್ವರಿತ ನೋವು ನಿವಾರಕ ಆಕ್ಯುಪ್ರೆಷರ್ ತರಬೇತಿ ಹಾಗೂ ಚಿಕಿತ್ಸಾ ಶಿಬಿರ ಹಾರಾಡಿ ವಿದ್ಯಾ ಮಂದಿರ ಶಾಲೆಯಲ್ಲಿ ಭಾನುವಾರ ಜರುಗಿತು.

ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

Advertisement. Scroll to continue reading.

ವೇದಿಕೆಯಲ್ಲಿ ಸ್ಥಳೀಯ ರಾಜಕೀಯ ಬ್ರಹ್ಮಾವರ ವ್ಯವಸಾಯಿ ಸೇವಾ ಸಹಕಾರಿಯ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ಶಾಲೆಯ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ, ಮಾಹೆ ಮಣಿಪಾಲ್ ನ ಸಹಾಯಕ ಉಪನ್ಯಾಸಕ ಜಯಶ್ರೀ ನಾಯಕ್, ಶಾಲೆಯ ಮುಖ್ಯೋಪಾಧ್ಯಾಯ ಬಿ. ಎಸ್ ರಾಮ್ ಶೆಟ್ಟಿ, ಸಾಲಿಕೇರಿ ದೇವಳದ ಮಾಜಿ ಮೊಕ್ತೇಸರರಾದ ಬಾಲಕೃಷ್ಣ ಶೆಟ್ಟಿಗಾರ್, ಡಾ ಶೈಲಾ ಲೋಬೊ, ಡಾ ಅರುಲ್ , ಡಾ, ನಫೀಜ್ , ಡಾ.ಮನಸ್ವೀ ಹಾಗೂ ಫ್ರೆಂಡ್ಸ್ ಕ್ಲಬ್ ಸಾಲಿಕೇರಿಯ ಅಧ್ಯಕ್ಷ ರೋಹನ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಜಯಶ್ರೀ ನಾಯಕ್ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸಿದರು. ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ನೇತ್ರದಾನದ ನೋಂದಣಿ ಮಾಡಿದವರನ್ನು ಗೌರವಿಸಲಾಯಿತು. ೧೨೫ ಮಂದಿ ಶಿಬಿರದ ಪ್ರಯೋಜನ ಪಡೆದರು.


ಮಾಸ್ಟರ್ ಹರ್ಷಿತ್ ಶೆಟ್ಟಿಗಾರ್ ಸ್ವಾಗತಿಸಿ , ಶ್ರವಣ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತನಾಡಿ, ಅಂಕಿತ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ, ತಿಲಕ್ ಶೆಟ್ಟಿಗಾರ್ ವಂದಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com