ಶಂಕರನಾರಾಯಣ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ : ಉಚಿತ ಕಂಪ್ಯೂಟರ್ ಕೊಡುಗೆ
Published
1
ಕುಂದಾಪುರ : ತಾಲೂಕಿನ ಶಂಕರನಾರಾಯಣ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಇಎಸ್ಐ ಸಾಫ್ಟ್ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಕಮಿಟಿ ವತಿಯಿಂದ ಉಚಿತವಾಗಿ 9 ಕಂಪ್ಯೂಟರ್ಗಳನ್ನು ಸಂಸ್ಥೆಯ ಉದ್ಯೋಗಿ,ಶಾಲೆಯ ಹಳೆ ವಿದ್ಯಾರ್ಥಿ ಗಣೇಶ್ ಕಿಣಿ ಹಾಗೂ ಅವರ ಪತ್ನಿ ಸ್ವಾತಿ ಕಿಣಿಯವರು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಶೆಟ್ಟಿ ಕಲ್ಗದ್ದೆ, ತಮ್ಮ ಪ್ರಸ್ತಾವನೆಯಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್ಗಳನ್ನು ವಿತರಿಸುವ ಮೂಲಕ ಇಎಸ್ಐ ಸಾಫ್ಟ್ವೇರ್ ಇಂಡಿಯಾ ಕಂಪನಿ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದರ ಮೂಲಕ ಒಂದು ಉತ್ತಮ ಮಾದರಿಯನ್ನು ಹಾಕಿರುತ್ತಾರೆ. ಶಾಲೆಯ ಪರವಾಗಿ ಹಾಗೂ ಮಕ್ಕಳ ಪರವಾಗಿ ನಾವು ಅವರಿಗೆ ಅಭಾರಿಯಾಗಿರುತ್ತೇವೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣ ರಾವ್ ಕಾರ್ಯಕ್ರಮ ನೇರವೆರಿಸಿದರು.
Advertisement. Scroll to continue reading.
ಈ ಸಂದರ್ಭದಲ್ಲಿ ಗಣೇಶ್ ಕಿಣಿ ಅವರ ತಂದೆ ಸುಬ್ರಾಯ ಕಿಣಿ, ತಾಯಿ ಲಕ್ಷ್ಮಿ ಕಿಣಿ, ಶಾಲಾ ಶಿಕ್ಷಕ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ್ ಮೋಗವೀರ, ಎಸ್ ಎನ್ ಈ ಟ್ರಸ್ಟ್ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿ ಕುಲಾಲ್, ಲತಾ ಎಸ್ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯ ಗುರುದತ್ ಶೆಟ್, ಜಯಶೀಲ ನಾಯ್ಕ್, ವಿಜಯ್ ಯಡಮಕ್ಕಿ ಉಪಸ್ಥಿತರಿದ್ದರು.