ಜೇರುಸಲೇಂ: ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5,000 ರಾಕೆಟ್‌ಗಳಿಂದ ದಾಳಿ ಮಾಡಿದ್ದಾರೆ.
ಇದರಿಂದ ದಕ್ಷಿಣ ಇಸ್ರೇಲ್‌ನಲ್ಲಿ ಒಬ್ಬ ನಾಗರಿಕ ಮೃತಪಟ್ಟು 16 ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ಗೆ ಇದು ಅನಿರೀಕ್ಷಿತ ದಾಳಿಯಾಗಿದ್ದು, ಸೇನೆ ಎಚ್ವೆತ್ತುಕೊಂಡಿದೆ.
ಇನ್ನು, ಇಸ್ರೇಲ್ ಆಕ್ರಮಣಕ್ಕೆ ಇತಿಶ್ರೀ ಹಾಡುತ್ತೇವೆ ಎಂದು ಹಮಾಸ್ ರಾಕೆಟ್ ದಾಳಿ ಮಾಡಿದೆ.
Advertisement. Scroll to continue reading.
ಈ ನಡೆಗೆ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಸ್ಟೇಟ್ ಆಫ್ ವಾರ್ ಘೋಷಣೆ ಮಾಡಿದೆ. ಬಾಂಬ್ ಸೆಲ್ವರ್‌ಗಳಲ್ಲಿ ಆಶ್ರಯ ಪಡೆಯಿರಿ ಎಂದು ತನ್ನ ನಾಗರಿಕರಿಗೆ ಹೇಳಿದೆ.
ಶನಿವಾರ ಮುಂಜಾನೆ ಗಾಜಾಪಟ್ಟಿಯಿಂದ 5,000 ರಾಕೆಟ್‌ಗಳ ದಾಳಿ ನಡೆಸಲಾಗಿದ್ದು, ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದ್ದಾರೆ
Advertisement. Scroll to continue reading.