ಹೊಸದಿಲ್ಲಿ: ಅಕ್ಟೋಬರ್ ತಿಂಗಳಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಎರಡೂ ವಿದ್ಯಮಾನಗಳು ಜರುಗಲಿವೆ. ಕೇವಲ ಎರಡು ವಾರಗಳ ಅಂತರದಲ್ಲಿ ಈ ಎರಡೂ ಗ್ರಹಣಗಳನ್ನು ವೀಕ್ಷಿಸುವ ಅವಕಾಶ ಜನರಿಗೆ ದೊರಕಲಿದೆ.
ಈ ತಿಂಗಳ 14 ರಂದು ಸೂರ್ಯಗ್ರಹಣ ಮತ್ತು 28ರಂದು ಚಂದ್ರ ಗ್ರಹಣ ಸಂಭವಿಸಲಿವೆ.
ಸೂರ್ಯಗ್ರಹಣ :
ದಿನಾಂಕ: ಅಕ್ಟೋಬರ್ 14ರ ಶನಿವಾರ
ಆರಂಭದ ಸಮಯ: ರಾತ್ರಿ 8:34
ಅಂತ್ಯದ ಸಮಯ: ರಾತ್ರಿ 2:25
Advertisement. Scroll to continue reading.
ಭಾರತದಲ್ಲಿ ಗೋಚರಿಸಲಿದೆಯಾ?
ಅ. 14ರಂದು ಸಂಭವಿಸುವ ವಾರ್ಷಿಕ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಯಾವುದೇ ಸೂತಕದ ಅವಧಿ ಇರುವುದಿಲ್ಲ.
ಅಮೆರಿಕದ ಪಶ್ಚಿಮ ಭಾಗ ಹಾಗೂ ಪೆಸಿಫಿಕ್ ಸಮುದ್ರದವರೆಗೆ ಸೇರಿದಂತೆ ಉತ್ತರ ಅಮೆರಿಕದಲ್ಲಿ ಸೂರ್ಯ ಗ್ರಹಣ ಗೋಚರಿಸುತ್ತದೆ.
ಚಂದ್ರ ಗ್ರಹಣ :
ಚಂದ್ರ ಗ್ರಹಣದ ದಿನಾಂಕ: ಅಕ್ಟೋಬರ್ 28ರ ಶನಿವಾರ
ಗ್ರಹಣದ ಆರಂಭದ ಸಮಯ: ರಾತ್ರಿ 1.05 ಗಂಟೆ
ಗ್ರಹಣದ ಮುಕ್ತಾಯ: ರಾತ್ರಿ 2:24 ಗಂಟೆ
Advertisement. Scroll to continue reading.
ಭಾಗಶಃ ಚಂದ್ರಗ್ರಹಣ:
ಅ. 28ರ ಮಧ್ಯರಾತ್ರಿ ಸಂಭವಿಸುವ ಭಾಗಶಃ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಪಶ್ಚಿಮ ಆಫ್ರಿಕಾ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕೂಡ ಕಾಣಿಸುತ್ತದೆ. ಸಂಪೂರ್ಣ ಚಂದ್ರ ಗ್ರಹಣವು ಅಂದಾಜು 15 ನಿಮಿಷಗಳವರೆಗೆ ಇರುತ್ತದೆ.