ನಟ ರವಿತೇಜ ಅವರು ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಹಬ್ಬಿದವರು. ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಅವರು ನಟಿಸಿರುವ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ. ಈ ನಡುವೆ ಅವರೊಂದು ಕಿರಿಕ್ ಮಾಡಿಕೊಂಡಿದ್ದಾರೆ. ನಟ ಯಶ್ ಬಗ್ಗೆ ರವಿತೇಜ ನೀಡಿದ ಒಂದು ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗಿದೆ.
ರವಿತೇಜ ಕ್ಷಮೆ ಕೇಳಬೇಕು ಎಂದು ಯಶ್ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.
ರವಿತೇಜ ಅವರು ‘ಟೈಗರ್ ನಾಗೇಶ್ವರ ರಾವ್’ ಸಿನಿಮಾದ ಪ್ರಚಾರಕ್ಕಾಗಿ ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾಗುತ್ತಿದೆ. ದಕ್ಷಿಣ ಭಾರತದ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನು ರವಿತೇಜ ವ್ಯಕ್ತಪಡಿಸಿದ್ದಾರೆ. ಈ ವೇಳೆ ‘ಯಶ್ ತುಂಬ ಲಕ್ಕಿ’ ಎಂದು ಅವರು ಹೇಳಿದ್ದಾರೆ. ಇದೇ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ.
Advertisement. Scroll to continue reading.
‘ಪ್ರಭಾಸ್, ರಾಮ್ ಚರಣ್, ರಾಜಮೌಳಿ, ಯಶ್, ದಳಪತಿ ವಿಜಯ್ ಅವರಿಂದ ನೀವು ಏನನ್ನು ಕದಿಯುತ್ತೀರಿ’ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ರವಿತೇಜ ಅವರು, ‘ಪ್ರಭಾಸ್ ಅವರಿಂದ ಅಪಿಯರೆನ್ಸ್, ರಾಮ್ ಚರಣ್ ಅವರಿಂದ ಡ್ಯಾನ್ಸ್, ರಾಜಮೌಳಿ ಅವರಿಂದ ವಿಷನ್ ಹಾಗೂ ವಿಜಯ್ ಅವರಿಂದ ಡ್ಯಾನ್ಸ್ ಕದಿಯುತ್ತೇನೆ’ ಎಂದರು.
‘ಯಶ್ ಅವರನ್ನು ನಾನು ಕೆಜಿಎಫ್ ಸಿನಿಮಾದಲ್ಲಿ ಮಾತ್ರ ನೋಡಿದ್ದು. ಅಂಥ ಸಿನಿಮಾದಲ್ಲಿ ನಟಿಸಲು ಅವರು ಲಕ್ಕಿ ಆಗಿದ್ದರು’ ಎಂದು ರವಿತೇಜ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಅಭಿಮಾನಿಗಳು ರವಿತೇಜ ಮಾತಿಗೆ ಕೆರಳಿದ್ದು, ಕ್ಷಮೆ ಕೇಳುವಂತೆ ತಾಕೀತು ಮಾಡಿದ್ದಾರೆ.
Advertisement. Scroll to continue reading.