ಶಿರ್ವ : ನಾಪತ್ತೆಯಾಗಿದ್ದ ಯುವತಿಯ ಶವ ನದಿಯಲ್ಲಿ ಪತ್ತೆಯಾಗಿದೆ. ವಿನಿತಾ(22) ಮೃತ ಯುವತಿ.
ಅಕ್ಟೋಬರ್ 9 ರಂದು ಮಧ್ಯಾಹ್ನ ಅಕ್ಕ ವಿದ್ಯಾರವರಲ್ಲಿ ತಾನು ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದ ವಿನಿತಾ ರಾತ್ರಿಯಾದರೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಬೆಳ್ಳೆ ಗ್ರಾಮದ ಪಡುಬೆಳ್ಳೆ ಕಾಡ್‌ಲಚ್ಚಿಲ್ ಎಂಬಲ್ಲಿರುವ ಪಾಪನಾಶಿನಿ ನದಿಯಲ್ಲಿ ವಿನಿತಾ ಮೃತದೇಹ ಪತ್ತೆಯಾಗಿದೆ.
Advertisement. Scroll to continue reading.
ಬಿ.ಕಾಂ. ಪದವೀಧರೆಯಾಗಿದ್ದ ವಿನಿತಾ ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು.
ವಿನಿತಾ ಯಾವುದೋ ಕಾರಣಕ್ಕೆ ಜೀವನದಲ್ಲಿ ಮನನೊಂದು ಪಾಪನಾಶಿನಿ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.