ಕರಾವಳಿ

ಸವಣಾಲು : ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನ : ನವರಾತ್ರಿ ಸಂಭ್ರಮ

0

ಸವಣಾಲು : ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವು ಅ.15 ಭಾನುವಾರ ದಿಂದ ಅ. 24ನೇ ಮಂಗಳವಾರದ ವರೆಗೆ ನಡೆಯಲಿದೆ.


ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ.


ಅ.20 ರಂದು ಶಾರದಾ ಪೂಜೆ, ಅ.22 ರವಿವಾರ ದಂದು ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು.

Advertisement. Scroll to continue reading.


ಅ.23 ಸೋಮವಾರದಂದು ಬೆಳಗ್ಗೆ 08:00ರಿಂದ 10:00 ರವರೆಗೆ ಅಕ್ಷರಾಭ್ಯಾಸ, ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.

ಅ.24 ಮಂಗಳವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿದೆ..

ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com