ರಾಜ್ಯ

ಮಕ್ಕಳು ಮಾತು ಕೇಳಿಲ್ಲವೆಂದು ಹಲ್ಲೆ ನಡೆಸಿ ತಾಯಿ ಆತ್ಮಹತ್ಯೆ; ಪುತ್ರಿ ಸಾವು, ಪುತ್ರ ಗಂಭೀರ

1

ವಿಜಯನಗರ: ಹೆತ್ತ ತಾಯಿಯೇ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. 

ಹಲ್ಲೆಯಲ್ಲಿ 18 ವರ್ಷದ ಶಮಬಾನು ಮೃತಪಟ್ಟಿದ್ದರೆ, 16 ವರ್ಷದ ಅಮಾನುಲ್ಲಾ ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳ ಮೇಲೆ ಹಲ್ಲೆ ನಡೆಸಿದ ಬಳಿಕ ತಾಯಿ 45 ವರ್ಷದ ಬೇಗಮ್‌ಬಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಕ್ಕಳು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಮಕ್ಕಳ ಮೇಲೆ ಬೇಗಮ್‌ಬಿ ಜಗಳವಾಡಿದ್ದಾರೆ. ನಂತರ ಕೋಪದಲ್ಲಿ ದೊಣ್ಣೆಯಿಂದ ಮಕ್ಕಳ ತಲೆಗೆ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶಮಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅಮಾನುಲ್ಲಾ ಪ್ರಜ್ಞಾಹೀನನಾಗಿದ್ದಾರೆ. ನಂತರ ತಾಯಿ ಬೇಗಮ್‌ಬಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement. Scroll to continue reading.

ಇನ್ನು, ಅಮಾನುಲ್ಲಾ ಕೋಮಾಗೆ ಜಾರಿದ್ದು ಆತನನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com