ಸಿನಿಮಾ

ಖ್ಯಾತ ಕಲಾನಿರ್ದೇಶಕ ಮಿಲನ್ ಫರ್ನಾಂಡೀಸ್ ಹೃದಯಾಘಾತದಿಂದ ನಿಧನ

0

ಚೆನ್ನೈ : ಖ್ಯಾತ ಕಲಾ ನಿರ್ದೇಶಕ ಮಿಲನ್ ಫರ್ನಾಂಡೀಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಮಾಗಿಜ್ ತಿರುಮೇನಿ ನಿರ್ದೆಶನದ ನಟ ಅಜಿತ್ ಕುಮಾರ್ ನಟನೆಯ ‘ವಿದಾ ಮುಯಾರ್ಚಿ’ ಅಜೆರ್ಬೈಜಾನ್‌ನಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದ ಮಿಲನ್ ಚಿತ್ರೀಕರಣ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿದೆ ಎನ್ನಲಾಗಿದೆ.

‘ಕಲಾಭಾ ಕಾದಲನ್’ ಮತ್ತು ‘ಸಾಮಿ 2’ ನಂತಹ ಚಿತ್ರಗಳಿಂದ ಮಿಲನ್ ಖ್ಯಾತಿಗಳಿಸಿದ್ದರು.

Advertisement. Scroll to continue reading.

ಸುದ್ದಿ ತಿಳಿದ ತಕ್ಷಣ ಅಜಿತ್ ಆಸ್ಪತ್ರೆಗೆ ತೆರಳಿದರು. ಅವರೊಂದಿಗೆ ಚಿತ್ರದ ನಿರ್ದೇಶಕ ಮಗಿಜ್ ತಿರುಮೇನಿ ಮತ್ತು ಛಾಯಾಗ್ರಾಹಕ ನೀರವ್ ಶಾ ಇದ್ದರು. ಅವರು ಆಸ್ಪತ್ರೆಯನ್ನು ತಲುಪುವ ಮೊದಲೇ ಮಿಲನ್ ನಿಧನರಾಗಿದ್ದರು ಎಂದು ವರದಿ ತಿಳಿಸಿದೆ.

ಸ್ಟಾರ್ ನಟರೊಂದಿಗೆ ಕೆಲಸ :

ಮಿಲನ್ ಫರ್ನಾಂಡಿಸ್ ಚೆನ್ನೈನಲ್ಲಿ ಜನಿಸಿದರು. 1999ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಪ್ರಸಿದ್ಧ ಕಲಾ ನಿರ್ದೇಶಕ ಸಾಬು ಸಿರಿಲ್ ಅವರೊಂದಿಗೆ ಕೆಲಸ ಮಾಡಿದರು. ಅಜಿತ್ ಕುಮಾರ್ ಅವರ ಸಿಟಿಜನ್ (2001), ದಳಪತಿ ವಿಜಯ್ ನಟನೆಯ ತಮಿಳಿಯನ್ (2002), ಅಜಿತ್ ಅವರ ರೆಡ್ (2002), ವಿಲನ್ (2002), ಚಿಯಾನ್ ವಿಕ್ರಮ್ ಅವರ ಅನ್ನಿಯನ್ (2005) ಈ ಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಇದಾದ ನಂತರ, ‘ಕಲಬ ಕಾದಲನ್’ ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಸಿನಿಮಾವು 2006ರಲ್ಲಿ ಬಿಡುಗಡೆಯಾಯಿತು. ಬಳಿಕ 2007ರಲ್ಲಿ ತೆರೆ ಕಂಡ ‘ಓರಂ ಪೊ’ ಚಿತ್ರದಲ್ಲಿ ಕೆಲಸ ಮಾಡಿದರು. ಮಿಲನ್ ಫರ್ನಾಂಡಿಸ್ ಈವರೆಗೆ ಒಟ್ಟು 30ಕ್ಕೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಜಿತ್ ಕುಮಾರ್ ಅಭಿನಯದ ಹಲವಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿದ್ದಾರೆ. ಇವರು ಅಜಿತ್ ಅವರ ನೆಚ್ಚಿನ ಆರ್ಟ್ ಡೈರೆಕ್ಟರ್ ಅನ್ನುವುದು ಗಮನಾರ್ಹ.

Advertisement. Scroll to continue reading.

ಇದಲ್ಲದೇ, ಕೆಲವು ಜಾಹೀರಾತುಗಳಿಗೂ ಕಲಾ ನಿರ್ದೇಶಕರಾಗಿದ್ದಾರೆ. ಶಕ್ತಿ ಮಸಾಲಾ, ಆಚ ಮಸಾಲಾ, ಆರ್ ಎಂಕೆವಿ ಸಿಲ್ಫ್, ಸರವಣ ಸ್ಟೋರ್ಸ್ ಮತ್ತು ಪೋಥಿಸ್ ನಂತಹ ಕಂಪನಿಗಳ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ಮಿಲನ್ ಫರ್ನಾಂಡಿಸ್ ಅವರ ಅತ್ಯಂತ ಪ್ರಸಿದ್ಧ ಪ್ರಾಜೆಕ್ಟ್ ಗಳಲ್ಲಿ ಅಜಿತ್ ಕುಮಾರ್ ಅಭಿನಯದ ‘ಬಿಲ್ಲಾ’ (2007) ಚಿತ್ರವೂ ಒಂದು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com