ಇಸ್ಲಾಮಾಬಾದ್ : ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಂಗಳವಾರ ಸಂಜೆ ಎಕ್ಸ್‌ನಲ್ಲಿ ಪೋಸ್ಟೊಂದನ್ನು ಹಾಕಿದ್ದು, “2023 ರ ಅಕ್ಟೋಬರ್ 14 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ವರ್ತನೆ ತೋರಿದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ಗೆ ಅಧಿಕೃತ ದೂರು ಸಲ್ಲಿಸಿದೆ” ಎಂದು ಹೇಳಿದೆ.
ಘಟನೆಯ ನಿಖರ ಸ್ವರೂಪದ ಬಗ್ಗೆ ಪಿಸಿಬಿ ಸ್ಪಷ್ಟಪಡಿಸಿಲ್ಲ. ಅಂದ್ಹಾಗೆ, ಕಳೆದ ವಾರ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು.
2023 ರ ವಿಶ್ವಕಪ್‌ನ್ನು ವರದಿ ಮಾಡಲು ಬಯಸಿದ ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬದ ಬಗ್ಗೆ ‘ಔಪಚಾರಿಕ ಪ್ರತಿಭಟನೆ’ ಸಲ್ಲಿಸುತ್ತಿರುವುದಾಗಿ ಪಿಸಿಬಿ ಹೇಳಿದೆ.
Advertisement. Scroll to continue reading.
“ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು 2023 ರ ವಿಶ್ವಕಪ್‌ಗಾಗಿ ಪಾಕಿಸ್ತಾನ ಅಭಿಮಾನಿಗಳಿಗೆ ವೀಸಾ ನೀತಿಯ ಅನುಪಸ್ಥಿತಿಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಮತ್ತೊಂದು ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ‘ಎಕ್ಸ್’ ಹ್ಯಾಂಡಲ್ನಿಂದ ಪೋಸ್ಟ್ ಮಾಡಿದೆ.
ಈ ಹಿಂದೆ ಪಾಕಿಸ್ತಾನ ತಂಡದ ನಿರ್ದೇಶಕ ಮತ್ತು ಮುಖ್ಯ ತರಬೇತುದಾರ ಮಿಕ್ಕಿ ಆರ್ಥರ್, ಭಾರತ ವಿರುದ್ಧದ ಸೋಲಿನ ನಂತರ ಪ್ರೇಕ್ಷಕರ ವರ್ತನೆ ಮತ್ತು ತಂಡದ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದ್ದರು. ಮೈದಾನಲ್ಲಿದ್ದ ಅಪಾರ ಸಂಖ್ಯೆ ಭಾರತೀಯ ಕ್ರೀಡಾಭಿಮಾನಿಗಳು ಪಾಕಿಸ್ತಾನ ತಂಡದ ವಿರುದ್ಧ ಅನುಚಿನ ವರ್ತನೆ ತೋರಿ ಅವರ ಆಟಗಾರರ ಗಮನವನ್ನು ಹಾಳು ಮಾಡಿದರು ಎಂದು ಆರೋಪಿಸಿದ್ದರು.
Advertisement. Scroll to continue reading.