ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ ನಟನಾ ಲೋಕಕ್ಕೆ ಕಾಲಿಡುತ್ತಿದ್ದು, ತಮ್ಮ ಹೊಸ ಚಿತ್ರದ ಕುರಿತು ಇತ್ತೀಚೆಗಷ್ಟೆ ಅನೌನ್ಸ್ ಮಾಡಿದ್ದರು. ಯುಟಿ69 ಚಿತ್ರದ ತಯಾರಿಯಲ್ಲಿದ್ದರು.
ಈ ಚಿತ್ರದ ಪ್ರಚಾರದ ನಡುವೆ ರಾಜ್ ಕುಂದ್ರಾ ಶಾಕ್ ಕೊಟ್ಟಿದ್ದಾರೆ. ಹೌದು, ಇದನ್ನು ನೋಡಿ ಅಭಿಮಾನಿಗಳು ನಿಬ್ಬೆರಗಾಗಿದ್ದರು.
Advertisement. Scroll to continue reading.
“ನಾವು ಬೇರ್ಪಟ್ಟಿದ್ದೇವೆ ಮತ್ತು ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಮಯ ನೀಡುವಂತೆ ನಿಮ್ಮೆಲ್ಲರನ್ನೂ ವಿನಂತಿಸುತ್ತೇವೆ. ” ಎಂದು ಬರೆದುಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನವೆಂಬರ್ 2009 ರಲ್ಲಿ ವಿವಾಹವಾದರು. ಅವರು ಮದುವೆಯಾಗಿ 14 ವರ್ಷಗಳನ್ನು ಪೂರೈಸಿದ್ದಾರೆ. ಇವರಿಬ್ಬರು ಬೇರ್ಪಡುತ್ತಿದ್ದಾರಾ ಎಂಬ ಚಿಂತೆ ಅಭಿಮಾನಿಗಳಲ್ಲಿ ಕಾಡಿತ್ತು. ಈ ಪೋಸ್ಟ್ ಶಾಕ್ ನೀಡಿತ್ತು.
ಆದರೆ, ಇನ್ನೊಂದು ಪೋಸ್ಟ್ ಹರಿಬಿಟ್ಟಿದ್ದಾರೆ ರಾಜ್ ಕುಂದ್ರಾ, ಫೇರ್ವೆಲ್ ಮಾಸ್ಕ್ಗಳು …ಈಗ ಬೇರ್ಪಡಿಸುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಪ್ರಯಾಣದ ಮುಂದಿನ ಹಂತ #UT69 ಎಂದು ಬರೆದುಕೊಂಡಿದ್ದಾರೆ.
Advertisement. Scroll to continue reading.