ಡಾಕ್ಟರ್ ಬ್ರೋ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ…ದೇಶ, ವಿದೇಶಗಳನ್ನು ಸಂಚರಿಸುತ್ತಾ…ಅಲ್ಲಿಯ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ. ಇದರಿಂದ ಅವರಿಗೆ ಅವರದೇ ಆದ ಅಭಿಮಾನಿಗಳಿದ್ದಾರೆ. ಡಾ.ಬ್ರೋ ಅಂದ್ರೆ ಸಾಕು, ಕಣ್ಣರಳಿಸೋ ಮಂದಿ ಅನೇಕ. ಹೀಗಿರುವಾಗ ಇತ್ತೀಚೆಗೆ ಚೀನಾ ದೇಶಕ್ಕೆ ಹೋಗಿದ್ದರು. ಅಲ್ಲಿಯ ಅಭಿವೃದ್ಧಿ ಕಂಡು ಬೆರಗಾಗಿದ್ದಾರೆ. ಡಾಕ್ಟರ್ ಬ್ರೋ ಮಿಸ್ಟರ್ ಗಗನ್ ಶ್ರೀನಿವಾಸ್ ಅಲ್ಲಿಯ ಅಭಿವೃದ್ಧಿಯನ್ನ ಕೊಂಡಾಡಿದ್ದಾರೆ. ಅಲ್ಲದೇ,
ನಮ್ಮ ದೇಶ ರಾಜಕೀಯ ಜಾತಿ-ಧರ್ಮ ಹೀಗೆ ಇಂತಹ ವಿಷಯದಲ್ಲಿಯೇ ಎಲ್ಲರೂ ಕಳೆದು ಹೋಗುತ್ತಿದೆ. ಅಭಿವೃದ್ಧಿ ಅನ್ನೊದು ಇಲ್ವೇ ಇಲ್ಲ. ಆದರೆ ಚೀನಾ ದೇಶದ ರಾಜಕಾರಣಿಗಳು ದೇಶವನ್ನ ಅಭಿವೃದ್ಧಿ ಮಾಡೋದ್ರಲ್ಲಿಯೇ ಬ್ಯುಸಿ ಇರ್ತಾರೆ. ಹೊರತು ರಾಜಕೀಯ ಮಾಡೋದಿಲ್ಲ ಅಂತಲೂ ವಿಶ್ಲೇಷಣೆ ಮಾಡಿದ್ದಾರೆ.
ಚೀನಾ ದೇಶದ ಅಭಿವೃದ್ಧಿಯನ್ನ ಹೊಗಳೋಭರದಲ್ಲಿ ಇಲ್ಲಿಯ ಮಕ್ಕಳು ಸ್ಕಿಲ್ಗಳನ್ನು ಡಾಕ್ಟರ್ ಬ್ರೋ ಕೊಂಡಾಡಿದ್ದಾರೆ. ಇದು ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಇಲ್ಲಿ ಶಾಲೆಯ ಹಂತದಲ್ಲಿಯೇ ಸ್ಕಿಲ್ಸ್ ಕಲಿಸಿಕೊಡ್ತಾರೆ.
ನನ್ನ ಈ ಒಂದು ವಿಡಿಯೋ ನೋಡಿದ್ರೆ, ನೀವು ಸಿಟ್ಟಾಗುತ್ತೀರಾ, ಆದರೆ ಸತ್ಯ ಹೇಳಬೇಕಲ್ವೇ ಅಂತಲೂ ಡಾಕ್ಟರ್ ಬ್ರೋ ಹೇಳುತ್ತಾರೆ.
Advertisement. Scroll to continue reading.
ಡಾಕ್ಟರ್ ಬ್ರೋ ಈ ಒಂದು ವಿಡಿಯೋ ಮೂಲಕ ಇದೀಗ ಹೆಚ್ಚು ವೈರಲ್ ಆಗುತ್ತಿದ್ದಾರೆ. ದೇಶಪ್ರೇಮಿಗಳ ಕೆಂಗಣ್ಣಿಗೂ ಗುರಿ ಆಗಿದ್ದಾರೆ. ಕೆಲವರು ದೇಶದ್ರೋಹಿ ಎಂದು ಅವರನ್ನು ಕರೆಯುತ್ತಿದ್ದಾರೆ.
ಇನ್ನು ಕೆಲವರು ನಿಮ್ಮ ಮಾತು ಸತ್ಯ ಬ್ರೋ ಎಂದು ಕಮೆಂಟ್ ಮಾಡುತ್ತಿದ್ದಾರೆ.
Advertisement. Scroll to continue reading.