ಏಷ್ಯನ್ ಪ್ಯಾರಾ ಗೇಮ್ಸ್ 2023 : ಟಿ 64 ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಉನ್ನಿ ರೇಣು ಕಂಚಿನ ಪದಕ ಗೆದ್ದಿದ್ದಾರೆ.
ಈ ಮೂಲಕ ಈ ಬಾರಿ ಟಿ -64 ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ಎರಡು ಪದಕಗಳು ಭಾರತಕ್ಕೊಲಿದಿವೆ.
ಟೋಕಿಯೊ 2021ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪ್ರವೀಣ್ ಕುಮಾರ್, ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ 2.02 ಮೀಟರ್ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಉನ್ನಿ ರೇಣು 1.95 ಮೀಟರ್ ಜಿಗಿದು ಕಂಚಿನ ಪದಕ ಗೆದ್ದಿದ್ದಾರೆ.
Advertisement. Scroll to continue reading.
ಈಗಾಗಲೆ ಪುರುಷರ 5000 ಮೀಟರ್ ಟಿ 11 ಸ್ಪರ್ಧೆಯಲ್ಲಿ ಅಂಕುರ್ ಧಾಮಾ ಚಿನ್ನ ಗೆದ್ದಿದ್ದು, ಪುರುಷರ 60 ಕೆಜಿ ಜೆ 1 ಸ್ಪರ್ಧೆಯಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಕಪಿಲ್ ಪರ್ಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.