ಮಣಿಪಾಲ : ಪ್ರತ್ಯೇಕ ಪ್ರಕರಣದಲ್ಲಿ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿ ಎಗರಿಸಿರುವ ಘಟನೆ ನಡೆದಿದೆ.
ಮಣಿಪಾಲದ ಮಂಜುನಾಥ ನಾಗಪ್ಪ ಎಂಬವರಿಗೆ ಬೇರೆ ನಂಬರ್ ನಿಂದ Account KYC ಬ್ಲಾಕ್ ಆಗಿರುವ ಬಗ್ಗೆ ಮಸೇಜ್ ಬಂದಿದೆ. ಅದರಂತೆ ಅವರು ಮೇಸೆಜ್ ನಲ್ಲಿರುವ ಮೊಬೈಲ್ ನಂಬರ್ಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿದ ವ್ಯಕ್ತಿ ಪಿರ್ಯಾದಿದಾರ ಮೊಬೈಲ್ ಗೆ ಬಂದ OTP ನಂಬರ್ ಕೇಳಿದಾಗ ಮಂಜುನಾಥ ನೀಡಿದ್ದಾರೆ. ತಕ್ಷಣ ಅಕೌಂಟ್ನಿಂದ 23,300/- ರೂಪಾಯಿಗಳು ವರ್ಗಾವಣೆಗೊಂಡಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು, ಜಗದೀಶ ಎಂಬವರ ಮಣಿಪಾಲ ಶಾಖೆಯ ಅಕೌಂಟ್ ನಂಬರ್ ನಿಂದ ಅವರ ಗಮನಕ್ಕೆ ಬಾರದೇ ಯಾರೋ ಹಣ ಎಗರಿಸಿದ್ದಾರೆ. ಪರಿಚಿತರು ರೂಪಾಯಿ 30,000 ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.