ಬ್ರಹ್ಮಾವರ : ನೀಲಾವರ ಗ್ರಾಮ ಪಂಚಾಯತ್ ಮತ್ತು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಕುತ್ಪಾಡಿ ಉದ್ಯಾವರ ಇವರ ಜಂಟಿ ಆಶ್ರಯದಲ್ಲಿ ನೀಲಾವರ ಗ್ರಾಮ ಪಂಚಾಯತ ವ್ಯಾಪ್ತಿಯ ಎಂ ಎಂ ಸಿ ಫ್ರೆಂಡ್ಸ್ ಚೈತನ್ಯ ಯುವಕ ಮಂಡಲ ರಿ.ದೇವಾಡಿಗರ ಯುವ ವೇದಿಕೆ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ನೀಲಾವರ ಕ್ರಾಸ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಗುರುವಾರ ಜರುಗಿತು.
161 ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.
ಗ್ರಾಮ ಪಂಚಾಯತಿ ಅಧ್ಯಕ್ಷ ಬೇಬಿ.ಕೆ , ಎಸ್ಡಿಎಂ ಕಾಲೇಜ್ ಮತ್ತು ಆಸ್ಪತ್ರೆಯ ಡಾ. ಮಮತಾ, ಡಾ.ನಾಗರಾಜ್ ಅವವರ ವೈದ್ಯ ತಂಡ, ಉಪಾಧ್ಯಕ್ಷ ರಮೇಶ್ ಪೂಜಾರಿ, ಪಿಡಿಒ ಗೀತಾ ಬಾಳಿಗ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.
Advertisement. Scroll to continue reading.