ಕರಾವಳಿ

ಬಾರಕೂರಿನಲ್ಲಿ ಪುನೀತ್ ರಾಜ್‌ಕುಮಾರ್ ಸಂಸ್ಮರಣೆ

1

ವರದಿ : ಬಿ.ಎಸ್.ಆಚಾರ್ಯ


ಬ್ರಹ್ಮಾವರ: ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ ಕುಮಾರವರಂತೆ ಕನ್ನಡ ಜನರ ಹೃದಯ ಗೆದ್ದು ಅಕಾಲದಲ್ಲಿ ಮರಣಹೊಂದಿದ ಪುನೀತ್ ರಾಜ್ ಕುಮಾರ್ ರವರ ಸಂಸ್ಮರಣೆಯನ್ನು ಬಾರಕೂರು ಮುಖ್ಯ ರಸ್ತೆಯಲ್ಲಿರುವ ಮಣೆಗಾರ ಕೇರಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಆಚರಿಸಲಾಯಿತು.
ದೇವಸ್ಥಾನದ ಮೋಕ್ತೇಸರ ನಿತ್ಯಾನಂದ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಬಳಿಕ ಪುನೀತ್ ರಾಜ್ ಕುಮಾರ ಅವರ ಬೃಹತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Advertisement. Scroll to continue reading.


ಬಳಿಕ ಗಣೇಶ ಬಾರಕೂರು ಮತ್ತು ತಂಡದ ಸವಿತಾ ಜೋಗಿ, ದಿನೇಶ್ ಹಾವಂಜೆ ಮತ್ತು ಗಣೇಶ್ ಪೂಜಾರಿ ಗರಡಿ, ಗಣೇಶ್ ಕುಮಾರ್ ಅವರು ಡಾ ರಾಜ್ ಕುಮಾರ ರವರ ಮತ್ತು ಪುನೀತ್ ರಾಜ್ ಕುಮಾರ ಅವರು ಹಾಡಿದ ಅನೇಕ ಹಾಡುಗಳನ್ನು ಹಾಡಿ ಗೀತ ಗಾಯನ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಅನೇಕರು ಹಾಜರಿದ್ದು, ನುಡಿ ನಮನ ಸಲ್ಲಿಸಿದರು. ಶ್ರೀ ಸೋಮನಾಥೇಶ್ವರ ಗೆಳೆಯರ ಬಳಗ ಬಾರಕೂರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com